Belagavi NewsBelgaum NewsKannada NewsKarnataka News
*ಕರೆಂಟ್ ಬಿಲ್ ತುಂಬದ ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಶಾಕ್ ನೀಡಿದ ಹೆಸ್ಕಾಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಕಳೆದ ನಾಲ್ಕು ತಿಂಗಳಿನಿಂದ ಹೆಸ್ಕಾಂ ಗೆ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡುವ ಮೂಲಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಬಿಲ್ ತುಂಬದ ಕಾರಣ ಬೆಳಗಾವಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕರೆಂಟ್ ಕಟ್ ಮಾಡಲಾಗಿದೆ. ಇದರ ಪರಿಣಾಮ ಸಿಬ್ಬಂದಿಗಳ ಪರದಾಟ ನಡೆಸಿದ್ದಾರೆ.
ಬೆಳಗಾವಿ ನಗರದ ಡಿಸಿ ಕಚೇರಿ ಆವರಣದಲ್ಲಿ ಇರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಇರುವ ಸಬ್ ರಿಜಿಸ್ಟರ್ ಕಚೇರಿಗೆ ಸಂಪೂರ್ಣ ವಿದ್ಯುತ್ ಕಟ್ ಮಾಡಲಾಗಿದೆ. 4 ತಿಂಗಳಿಂದ 2 ಲಕ್ಷ 31 ಸಾವಿರ ರೂಪಾಯಿ ಬಾಕಿ ಉಳಿಸಲಾಗಿದೆ. ಬಾಕಿ ಬಿಲ್ ತುಂಬುವಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಬಿಲ್ ತುಂಬದ ಸಬ್ ರಿಜಿಸ್ಟಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರ ಪರಿಣಾಮ ಕಚೇರಿಗೆ ಬರುವ ಜನರು ಪರದಾಟ ನಡೆಸಿದ್ದಾರೆ.


