Kannada NewsKarnataka News

ಬಾಕಿ ಉಳಿಸಿಕೊಂಡವರಿಗೆ ಹೆಸ್ಕಾಂ ಶಾಕ್

ಬಾಕಿ ಉಳಿಸಿಕೊಂಡವರಿಗೆ ಹೆಸ್ಕಾಂ ಶಾಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ವಿದ್ಯುತ್ ತಂತಿ ಮುಟ್ಟಿದರೆ ಮಾತ್ರ ಕರೆಂಟ್ ಶಾಕ್ ಹೊಡೆಯುತ್ತೆ ಎಂದು ನೀವಂದುಕೊಂಡಿದ್ದರೆ ತಪ್ಪು. ಇನ್ನು ಮುಂದೆ ಬಿಲ್ ಕಟ್ಟದಿದ್ದರೂ ಹೆಸ್ಕಾಂ ಶಾಕ್ ಕೊಡುತ್ತದೆ. ಆದರೆ ಅದು ಮಾಮೂಲಿ ಶಾಕ್ ಅಲ್ಲ.

ಬೆಳಗಾವಿ ವಿದ್ಯುತ್ ಪ್ರಸರಣ ನಿಗಮ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಕೇವಲ 100 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ವಿದ್ಯುತ್ ಕಡಿತ ಮಾಡಲು ಹೆಸ್ಕಾಂ ಮುಂದಾಗಿದೆ. ವಿದ್ಯುತ್ ನಿಲುಗಡೆ ಅಭಿಯಾನವನ್ನೇ ಆರಂಭಿಸಿದೆ ಬೆಳಗಾವಿ ನಗರ ಉಪವಿಭಾಗ 3.

ಹೆಚ್ಚುತ್ತಿರುವ ಬಿಲ್ ಬಾಕಿ ತಡೆಯಲು ಹೆಸ್ಕಾಂ ಈ ಅಭಿಯಾನ ಆರಂಭಿಸಿದೆ. ದೊಡ್ಡ ದೊಡ್ಡ ವ್ಯಕ್ತಿಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುತ್ತಾರೆ. ಅಂತವರ ವಿದ್ಯುತ್ ಕಡಿತ ಮಾಡುವುದಿಲ್ಲ ಎನ್ನುವ ಆರೋಪ ಹೆಸ್ಕಾಂ ಮೇಲಿದೆ. ಆದರೆ ಈಗ 100 ರೂ. ಬಿಲ್ ಬಾಕಿ ಉಳಿಸಿಕೊಂಡರೂ ವಿದ್ಯುತ್ ಕಡಿತಕ್ಕೆ ನಿರ್ಧರಿಸಲಾಗಿದೆ.

Home add -Advt

ಈ ಅಭಿಯಾನದ ಮೂಲಕ ಎಷ್ಟು ಬಾಕಿ ಬಿಲ್ ವಸೂಲಿಯಾಗುತ್ತದೆ ಕಾದು ನೋಡಬೇಕಿದೆ.

ಮಳೆ ಅವಾಂತರ; ಸಹಕರಿಸಲು ಹೆಸ್ಕಾಂ ಮನವಿ ; ಹೆಚ್ಚುವರಿ ಸಿಬ್ಬಂದಿ ಬೇಡಿಕೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button