Latest

ಗಾಂಜಾ ಗಿಡ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಾಂಜಾ ಗಿಡಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹಿಡಕಲ್ ಪೊಲೀಸರು ಬಂಧಿಸಿದ್ದಾರೆ.

ಅಣ್ಣಾಸಾಹೇಬ ಮುದುಕಪ್ಪ ಪಾಟೀಲ (42) ಹಿಡಕಲ್‌ ಗ್ರಾಮದಲ್ಲಿ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿದ್ದಾನೆ. ಶ್ರೀಪಾದ ಜಲ್ಲೆ, ಪೊಲೀಸ್ ಉಪಾಧೀಕ್ಷಕರು ಅಥಣಿ ಉಪ-ವಿಭಾಗ, ಕೆ, ಎಸ್, ಹಟ್ಟಿ, ಸಿಪಿಐ ಹಾರೂಗೇರಿ ವೃತ್ತ ರವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಖೋತ. ಪಿಎಸ್‌ಐ(ಕಾ&ಸು) ಹಾರೂಗೇರಿ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿ ಬೆಳೆದ ಹಸಿ ತೇವಾಂಶ ಇದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

Related Articles

ಒಟ್ಟು ಮೂರು ಗಿಡಗಳನ್ನು ಜಪ್ತಿ ಮಾಡಿದ್ದು, ಒಟ್ಟು ತೂಕ 10 ಕೆ.ಜಿ 500 ಗ್ರಾಂ. ನೇದ್ದನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಮರಾಠಿಯ ಬಾಯ್ಸ್ -3 ಸಿನೇಮಾ ನಿರ್ಬಂಧಿಸಲು ಕರವೇ ಆಗ್ರಹ

https://pragati.taskdun.com/latest/karave-objectionsrelease-boys-3marathi-filmin-karnataka/

Home add -Advt

Related Articles

Back to top button