Latest

ಬೆಂಗಳೂರಿನಲ್ಲಿ ಹೈ ಅಲರ್ಟ್: ಬಿಬಿಎಂಪಿಯಿಂದ ನೋಟೀಸ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಾಲರಾ ಮತ್ತು ಕೊರೋನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿರುವ ಸ್ಟಾರ್ ಹೊಟೆಲ್ ಮತ್ತು ಮ್ಯಾರೇಜ್ ಹಾಲ್ ಗಳಿಗೆ ಬಿಬಿಎಂಪಿ ತುರ್ತು ನೋಟೀಸ್ ಜಾರಿಗೊಳಿಸಿದೆ.

ಯಾವುದೇ ರೀತಿಯ ಹೊರಾವರಣ (Out door) ಕಾರ್ಯಕ್ರಮಗಳನ್ನು ಆಯೋಜಿಸದಂತೆ ಬಿಬಿಎಂಪಿ ಆಯುಕ್ತರ ಸೂಚನೆ ಮೇರೆಗೆ ಆರೋಗ್ಯಾಧಿಕಾರಿಗಳು ನೊಟೀಸ್ ನೀಡಿದ್ದಾರೆ. ಯಾವುದೇ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಬಿಬಿಎಂಪಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ನೀಡಿರುವನ ಲೈಸೆನ್ಸ್ ರದ್ಧುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Home add -Advt

Related Articles

Back to top button