Belagavi NewsBelgaum NewsKannada NewsKarnataka NewsLatest
*ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್: ಸನ್ನದ್ಧ ಸ್ಥಿತಿಯಲ್ಲಿ NDRF ಟೀಮ್*


ಪ್ರಗತಿವಾಹನಿ ಸದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಯಾವುದೆ ಕ್ಷಣದಲ್ಲಾದರೂ ಪ್ರವಾಹ ಸಂಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಮುಜಾಗೃತ ಕ್ರಮವಾಗಿ ಎನ್ ಡಿ ಆರ್ ಎಫ್ ಟೀಮ್ ಸನ್ನದ್ಧವಾಗಿದೆ.
ಪಕ್ಕದ ಮಹಾರಾಷ್ಟ್ರದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಅಬ್ಬರದ ಮಳೆಯಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಸೇತುವೆಗಳು ಮುಳುಗಡೆಯಾಗಿವೆ. ಅನೇಕ ಕಡೆಗಳಲ್ಲಿ ಮನೆಗಳು ಕುಸಿಯುತ್ತಿವೆ.

ಈಗಾಗಲೇ ಜಿಲ್ಲೆಯ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಇರುವುದರಿಂದ ಯಾವುದೇ ತುರ್ತು ಪರಿಸ್ಥಿಯನ್ನು ನಿಭಾಯಿಸಲು NDRF ಟೀಮ್ ಸನ್ನದ್ಧವಾಗಿದೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗಳೇದ ಅವರು, ಚಿಕ್ಕೋಡಿಯ ಮಲ್ಲಿಕವಾಡ-ದತ್ತವಾಡ ರಸ್ತೆಯಲ್ಲಿ ಇರುವ ಸೇತುವೆ ಪರಿಶೀಲನೆ ನಡೆಸಿ ಎನ್ ಡಿ ಆರ್ ಎಫ್ ಟೀಮ್ ಜೊತೆ ಸಂವಾದ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ