Kannada News

*ಡಿಕೆಶಿ ಆರ್ ಎಸ್ ಎಸ್ ಗೀತೆ ಹಾಡಿದನ್ನು ಹೈಕಮಾಂಡ ನೋಡಿಕೊಳ್ಳುತ್ತೆ: ಜಿ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ :  ಡಿಕೆಶಿ ಅವರು ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದರ ಬಗ್ಗೆ ನಾನು ಏನು ಹೇಳಲು ಬಯಸುವುದಿಲ್ಲ. ಇದನ್ನೆಲ್ಲಾ ನೋಡಿಕೊಳ್ಳಲು ಪಕ್ಷ ಇದೆ ಹೈಕಮಾಂಡ್ ಇದೆ. ಇದು ಅವರಿಗೆ ಬಿಟ್ಟ ವಿಚಾರ ಎಂದು ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. 

ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆರ್‌ಎಸ್ ಎಸ್ ಗೀತೆ ಹಾಡಿರುವ ಬಗ್ಗೆ ಎದ್ದಿರುವ ವಿವಾದದ ವಿಚಾರವಾಗಿ  ಮಾತನಾಡಿದ ಅವರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಾರೆ. ಅದೆಲ್ಲವನ್ನು ನಾವು ವಿಶ್ಲೇಷಣೆ ಮಾಡಲು ಹೋಗಲ್ಲ. ಪಕ್ಷ ಇದೆ ಹೈಕಮಾಂಡ್ ಅಂತ ಯಾಕೆ ಇರೋದು ಎಂದು ಪ್ರಶ್ನಿಸಿದ ಅವರು, ಯಾರ್ಯಾರಿಗೆ ಏನೇನು ಸೂಚನೆ ಕೊಡಬೇಕು ಕೊಡುತ್ತಾರೆ. ಶಿವಕುಮಾರ್ ಹೇಳಿದ್ದು ಹೈಕಮಾಂಡ್ಲೆ ತಪ್ಪು ಅನಿಸಿದರೆ ಅವರು ಹೇಳ್ತಾರೆ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ. ಅನ್ನೋದನ್ನ ಕೂಡ ನೋಡಬೇಕಲ್ಲ. ಅದು ತಪ್ಪಿಲ್ಲ ಅಂತ ಹೇಳಿದರೆ ಹೈಕಮಾಂಡ್ ಅವರು ಅವರಿಗೇ ಹೇಳುತ್ತಾರೆ ಎಂದು ನುಡಿದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಬಹಳ ಗಂಭೀರವಾಗಿ ತನಿಖೆ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂಬುದು ಇದೆ. ಎಸ್‌ಐಟಿ ಅವರ ಮೇಲೆ ಜವಾಬ್ದಾರಿ ಇದೆ. ಚಿನ್ನಯ್ಯ ಬಂಧನ ಆದ ಮೇಲೆ ಅದರ ಫಾಲೋಅಪ್ ಕೂಡ ಆಗ್ತಿದೆ. ಆದಷ್ಟು ಬೇಗ ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿದೆ. ತನಿಖೆ ಬೇಗ ಮುಗಿಸಬೇಕು ಅಂತ ಎಸ್‌ಐಟಿ ಅವರೂ ಪ್ರಯತ್ನ ಮಾಡುತ್ತಿದ್ದಾರೆ. ತಿಮರೋಡಿ ಮನೆ ಮೇಲೆ ಎಸ್‌ಐಟಿ ರೇಡ್ ವಿಚಾರವಾಗಿ ಸರ್ಕಾರ ಎಸ್‌ಐಟಿಗೆ ಯಾವುದೇ ನಿರ್ದೇಶನ ನೀಡಿಲ್ಲ. ನಾವು ಆದೇಶದಲ್ಲಿ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ. ಎಸ್‌ಐಟಿ ಅವರದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೋ ಅವರು ಯಾರನ್ನು ವಿಚಾರಣೆ ಕರೆಯುತ್ತಾರೋ, ಯಾರ ಮೇಲೆ ರೇಡ್ ಮಾಡ್ತಾರೋ ಅದನ್ನೆಲ್ಲ ನಮಗೆ ಹೇಳಿ ಕೇಳಿ ಮಾಡೋದಿಲ್ಲ ಎಂದರು.

ಸರ್ಕಾರ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಎನ್‌ಐಎಗೆ ಕೊಡಬೇಕಾದ ಅವಶ್ಯಕತೆ ಇಲ್ಲ. ನಮ್ಮ ಎಸ್‌ಐಟಿ ಸಮರ್ಪಕವಾಗಿ ತನಿಖೆ ಮಾಡುತ್ತಿದ್ದಾರೆ. ಅದರಲ್ಲಿ ಲೋಪ ಇದೆ ಅಂತ ಕಂಡು ಬಂದ್ರೆ ಅದು ಬೇರೆ ವಿಚಾರ. ಅವರು ತನಿಖೆ ಮಾಡಿ ವರದಿ ಕೊಡುವ ಮುನ್ನ ತನಿಖೆ ಸರಿ ಇಲ್ಲ ಅಂತ ಹೇಗೆ ಹೇಳೋದು ಎಂದು ಪ್ರಶ್ನಿಸಿದ ಜಿ. ಪರಮೇಶ್ವರ್, ಮಾತನಾಡುವಾಗ ಏನಾದರೂ ಮಾನದಂಡ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಐಎಗೆ ಕೊಡುವ ಅಗತ್ಯತೆ ಕಂಡುಬರುತ್ತಿಲ್ಲ. ವರದಿ ಬಂದ ನಂತರ ಪರ ವಿರೋಧ ಚರ್ಚೆ ಆಗುತ್ತೆ. ಆನಂತರ ಸರ್ಕಾರದ ಹಂತದಲ್ಲಿ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ. ಯಾವ ಆಧಾರದ ಮೇಲೆ ಸರ್ಕಾರವನ್ನು ತಪ್ಪಿತಸ್ಥರು ಅಂತ ಹೇಳ್ತಾರೆ. ಎಲ್ಲಾ ರೀತಿಯ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಎಸ್‌ಐಟಿ ಮಾಡಿದ್ದೇ ಷಡ್ಯಂತ್ರ ಎಂದರೆ ವಿಪರ್ಯಾಸ ಅಂತ ಹೇಳಬೇಕಾಗುತ್ತದೆ ಎಂದರು.

Home add -Advt

Related Articles

Back to top button