ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗರ್ಭಪಾತಕ್ಕೆ ನಿರ್ದೇಶನ ನೀಡುವಂತೆ ಕೋರಿ ಅತ್ಯಾಚಾರ ಸಂತ್ರಸ್ತ ಬಾಲಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಂತ್ರಸ್ತ ಬಾಲಕಿ 25 ವಾರಗಳ ಭ್ರೂಣದ ಗರ್ಭಪಾತಕ್ಕೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ, ಬಾಲಕಿ ಆರೋಗ್ಯ ಗಮನದಲ್ಲಿಟ್ಟುಕೊಂಡು ಗರ್ಭಪಾತ ಮಾಡುವಂತೆ ಆದೇಶ ನೀಡಿದೆ.
ಸಂತ್ರಸ್ತ ಬಾಲಕಿಯ ಗರ್ಭಪಾತ ಮಾಡುವಂತೆ ವಾಣಿ ವಿಲಾಸ್ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸರ್ಕಾರದ ವೆಚ್ಚದಿಂದಲೇ ಗರ್ಭಪಾತ ಮಾಡಬೇಕು. ಒಂದು ವೇಳೆ ಬಾಲಕಿಯ ಜೀವಕ್ಕೆ ಹಾನಿಯಾಗುವುದಿದ್ದರೆ ಗರ್ಭಪಾತ ಸೂಕ್ತವೇ ಇಲ್ಲವೇ ಎಂಬುದನ್ನು ವೈದ್ಯರೇ ನಿರ್ಧಾರ ಮಾಡಬೇಕು. ಗರ್ಭಪಾತ ಮಾಡಿದರೆ ಭ್ರೂಣವನ್ನು ಡಿಎನ್ ಎ ಪರೀಕ್ಷೆಗಾಗಿ ಕಾಯ್ದಿರಿಸಬೇಕು ಎಂದು ಸೂಚಿಸಿದೆ.
ಅಲ್ಲದೇ ಕೆ.ಜಿ.ಹಳ್ಳಿ ಪೊಲೀಸರಿಗೆ ಸಂತ್ರಸ್ತ ಬಾಲಕಿಯ ಪ್ರಯಾಣದ ಜವಾಬ್ದಾರಿಯನ್ನು ವಹಿಸಲಾಗಿದ್ದು, ಬಾಲಕಿಯನ್ನು ಆಸ್ಪತ್ರೆಗೆ ಕರೆತರುವ ಹಾಗೂ ಆಂಗಿದ್ದಾಂಗ್ಗೆ ತಪಾಸೆಣೆಗೆ ಅಗತ್ಯ ವ್ಯವಸ್ಥೆಯನ್ನು ಪೊಲೀಸರು ಮಾದಬೇಕು ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ