Kannada NewsLatest
ಹೊನ್ನಿಹಾಳದಲ್ಲಿ ಭಾವಸ್ಪರ್ಶಿ ಕಾರ್ಯಕ್ರಮ: ಬಹುಕಾಲದ ಬೇಡಿಕೆ ಈಡೇರಿಸಿದ್ದಕ್ಕೆ ಶಾಸಕರಿಗೆ ಹೃದಯಸ್ಪರ್ಶಿ ಸನ್ಮಾನ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಕಳೆದ ಒಂದು ದಶಕಕ್ಕೂ ಹೆಚ್ಚುಕಾಲದ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಶಾಸಕರನ್ನು ಸನ್ಮಾನಿಸಿ, ಹರಸಿ, ಹಾರೈಸಿದ ಅಪರೂಪದ ಭಾವಸ್ಪರ್ಶಿ ಕಾರ್ಯಕ್ರಮ ತಾಲೂಕಿನ ಹೊನ್ನಿಹಾಳದಲ್ಲಿ ಶನಿವಾರ ನಡೆಯಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಶ್ರೀ ಹನುಮಾನ ನಗರದಲ್ಲಿ (ಡಿಫೆನ್ಸ್ ಕಾಲೋನಿಗಳ) ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಗಳನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಹಿಂದಿನ ಶಾಸಕರ ಅವಧಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಗ್ರಾಮಸ್ಥರು ಕೋರಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಎದುರು ಬೇಡಿಕೆಯಿಟ್ಟಾಗ ಖಂಡಿತ ರಸ್ತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿ, ಇದೀಗ ರಸ್ತೆ ಕೆಲಸ ಪೂರ್ಣಗೊಳಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಶಾಸಕರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿ, ಹರಸಿ, ಆಶೀರ್ವದಿಸಿದರು. ಹೃದಯ ಸ್ಪರ್ಶಿ ಸನ್ಮಾನಕ್ಕೆ ಧನ್ಯವಾದ ಸಲ್ಲಿಸಿದ ಶಾಸಕರು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಹೀಗೆಯೇ ಮುಂದುವರೆಯಲಿ ಎಂದು ವಿನಂತಿಸಿದರು.
ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳಾದ, ಸಿದ್ದಪ್ಪ ತಾಯ್ಕರ್, ರವಿ ಕೆಂಗೇರಿ, ಸುನಿಲ ವನ್ನೂರ, ಡಿ ಬಿ ಹಂಜಿ, ಮಲ್ಲಿಕಾರ್ಜುನ ತಿಗಡಿ, ಸಿದ್ದನಗೌಡ ಪಾಟೀಲ, ಮಹಾಂತೇಶ ಹಿರೇಮಠ, ಪ್ರಕಾಶ ಮಾರಿಹಾಳ, ರಘು ಪಾಟೀಲ, ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ಮಾಲತಿ ಸು ವನ್ನೂರ, ಶೋಭಾ ಎಮ್ ತಿಗಡಿ, ಸವಿತಾ ತಾಯ್ಕರ್, ಗಿರಿಜಾ ತಾಯ್ಕರ್, ಶೋಭಾ ಪಾಟೀಲ, ರೂಪಾ ಪಾಟೀಲ, ಚನ್ನಮ್ಮ ಪಾಟೀಲ, ಸುಮಿತ್ರಾ ಸಿಂಗಾಡಿ, ಸುಜಾತಾ, ಗಾಯತ್ರಿ ನರಿಗೌಡರ, ದೀಪಾ ನಾವಲಗಿ, ದೀಪಾ ಮಾರಿಹಾಳ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
https://pragati.taskdun.com/latest/high-courtorderminer-girl-rape-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ