ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮೋದಗಾ ಗ್ರಾಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.
ಸೌಲಭ್ಯಗಳು ನಗರ ಪ್ರದೇಶಗಳನ್ನು ದಾಟಿ ಗ್ರಾಮೀಣ ಪ್ರದೇಶಕ್ಕೂ ಸಿಗಬೇಕು. ಹಾಗಾಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಇಂತಹ ಅನೇಕ ಪ್ರಯತ್ನಗಳನ್ನು ಮಾಡಿದ್ದೇನೆ. ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಜಿಮ್ ಉಪಕರಣಗಳನ್ನು ಕೊಡಲಾಗುತ್ತಿದೆ. ವಿಶೇಷವಾಗಿ ಯುವಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೆಬ್ಬಾಳಕರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಕಾಂಚನಾ ನಾಯಿಕ, ನಮ್ರತಾ ಕಾಳೆ, ಬಸವರಾಜ ಕಲ್ಲೂರ, ಶಿವಾನಂದ ರಾಜಗೋಳಿ, ಮಂಜುನಾಥ ತುಕ್ಕಾರ, ಶಿವಾಜಿ ಅಷ್ಟೇಕರ, ಓಮಣ್ಣಾ ಅಷ್ಟೇಕರ, ಬಸವಣ್ಣಿ ಮುಗಳಿ, ಪಾಂಡು ಬಡಗಾವಿ, ಸುಭಾಷ ಹೆಗಡೆ, ಮಂಗಳ ಅನಂತ ತಾರೀಹಾಳ, ಭಗೀರತಾ ಧಾನೋಜಿ, ಗಂಗವ್ವಾ ಮುಚ್ಚಂಡಿ, ಸಾಗರ ಹಣಬರ, ಮಾರುತಿ ಮುಗಳಿ, ಶಾಲಾ ಅಧ್ಯಾಪಕರು, ಎಸ್ ಡಿ ಎಮ್‌ಸಿ ಸದಸ್ಯರು, ಗ್ರಾಮದ ಯುವಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
https://pragati.taskdun.com/politics/lakshmi-hebbalkarhonnihalahanuman-nagararoad-inaguaration/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ