*ಘನತ್ಯಾಜ್ಯ ನಿರ್ವಹಣಾ ಟೆಂಡರ್ ವಿವಾದ: ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದ ವಿಪಕ್ಷ ನಾಯಕ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ₹39,437 ಕೋಟಿ ಮೊತ್ತದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದು ಒಂದು ಸ್ಪಷ್ಟ ಮನವಿಯನ್ನು ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಕೋರಿದ್ದೇನೆ. ಇದು ಕೇವಲ ಒಂದು ಟೆಂಡರ್ ವಿಚಾರವಲ್ಲ; ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಸತ್ಯ, ಪಾರದರ್ಶಕತೆ ಮತ್ತು ಜನಹಿತದ ಪರವಾಗಿ ನಿಲ್ಲುವುದು ಸಮಿತಿಯ ಜವಾಬ್ದಾರಿ. ಯಾವುದೇ ಪ್ರಭಾವ, ಒತ್ತಡ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ವಾಸ್ತವಾಂಶಗಳ ಆಧಾರದ ಮೇಲೆ ವರದಿ ನೀಡಬೇಕು.
ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಇಂದು ಸಮಿತಿಯ ಮುಂದಿದೆ. ನೆನಪಿರಲಿ, ಕರ್ನಾಟಕದ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ.
I have written to the High-Level Committee examining the ₹39,437 crore Solid Waste Management tender, urging its members to discharge their responsibility with integrity, independence, and fidelity to the public interest.
I have appealed to the Committee not to yield to any political, administrative, or external pressure, and to submit its findings guided solely by facts, evidence, and conscience.
This is not merely about a tender. It is about the future of Bengaluru, the prudent use of taxpayers’ money, and the trust that citizens place in public institutions.
The Committee has a historic opportunity to uphold transparency, accountability, and the larger public good. Its report must reflect the truth, free from influence or interference of any kind.
At moments such as these, conscience must prevail over pressure, and public interest over political expediency.
The people of Karnataka are watching closely and expect nothing less than a fair, objective, and fearless assessment.
Governments may come and go, but decisions involving public money and public trust leave a lasting mark. The Committee’s findings must stand the test of facts, scrutiny, and history.



