ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಲಸಿಕೆ ನೀಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸಿರುವ ರಾಜ್ಯ ಸರ್ಕಾರ ಲಸಿಕೆ ಕೊರತೆ ಎಂದು ಹೇಳಿ ಜನರು ಲಸಿಕಾ ಕೇಂದ್ರಗಳಿಗೆ ಬಂದು ವಾಪಸ್ ಮನೆಗೆ ಹೋಗುವಂತೆ ಮಾಡುತ್ತಿದೆ. ಇದೆಂಥ ಲಸಿಕಾ ಅಭಿಯಾನ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನರಿದ್ದಾರೆ ಇನ್ನೂ ಒಂದು ಪರ್ಸೆಂಟ್ ಜನರಿಗೂ ಲಸಿಕೆ ನೀಡಲಾಗಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ರಾಜ್ಯದ ಜನತೆಗೆ ಲಸಿಕೆ ನೀಡುವುದಾದರೂ ಯಾವಾಗ ಎಂದು ಪ್ರಶ್ನಿಸಿದೆ.
ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ಪಡೆಯುವುದು ಜನರ ಹಕ್ಕಲ್ಲವೇ? 26 ಲಕ್ಷ ಜನರು ವ್ಯಾಕ್ಸಿನ್ ಗಾಗಿ ಕಾಯುತ್ತಿದ್ದಾರೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ? ಇದೇ ರೀತಿ ಮುಂದುವರೆದರೆ 2 ದಿನಗಳಲ್ಲಿ ವ್ಯಾಕ್ಸಿನ್ ನೀಡುವಂತೆ ಆದೇಶ ನ್ಯಾಯಾಲಯವೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ