ಇದರಲ್ಲಿ ರಾಜಕೀಯ ಮಾಡಿದರೆ ನಾನು ಸಹಿಸುವುದಿಲ್ಲ; ಶಾಸಕಿ ಶಶಿಕಲಾ ಜೊಲ್ಲೆ ಎಚ್ಚರಿಕೆ
*ಯರನಾಳ ಗ್ರಾಮ ಪಂಚಾಯತಿಯ ಕಟ್ಟಡ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಇಡೀ ಬೆಳಗಾವಿ ಜಿಲ್ಲೆಯ ಗಮನ ಸೆಳೆದಿರುವ ಯರನಾಳ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಮಂಗಳವಾರ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಸರ್ಕಾರದ ಗ್ರಾಮ ಪಂಚಾಯತಿಯ ವಿಶೇಷ ಅನುದಾನದಡಿ 35 ಲಕ್ಷ ರೂಪಾಯಿಯಲ್ಲಿ ಮಂಜೂರಾದ ಬಾಪೂಜಿ ಸೇವಾ ಕೇಂದ್ರದ ಗ್ರಾಮ ಪಂಚಾಯಿತಿ ಕಟ್ಟಡ ಕಾರ್ಯಾಲಯ ಉದ್ಘಾಟನೆ ಶಾಸಕಿ ಶಶಿಕಲಾ ಜೊಲ್ಲೆ ನೆರವೇರಿಸಿದರು.
ಗ್ರಾ.ಪಂ.ಸದಸ್ಯೆ ಅರ್ಚನಾ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು.ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಗ್ರಾ.ಪಂ.ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಸರಕಾರಿ ಶಿಷ್ಟಾಚಾರದಂತೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅನಾವಶ್ಯಕವಾಗಿ ರಾಜಕೀಯ ಮಾಡಲು ಯತ್ನಿಸಿದ್ದು , ಗ್ರಾಮಸ್ಥರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಶಿಷ್ಟಾಚಾರದಂತೆ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು ಮುಂದೆ ಯಾರಾದರೂ ಇದರಲ್ಲಿ ರಾಜಕೀಯ ಮಾಡಿದರೆ ಅದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ . ತಾಲೂಕಿನ ಅಭಿವೃದ್ಧಿ ನನ್ನ ಗುರಿಯಾಗಿದೆ. ಒಳ್ಳೆಯ ಸಂಸ್ಕಾರ ನೀಡಿ ಜನರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ನೀಡುತ್ತಿದ್ದೇನೆ. ಶಿಕ್ಷಣ ,ಆರೋಗ್ಯ , ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುವೆ.
ತಾಲೂಕ ಅಧಿಕಾರಿಗಳು ರಾಜಕೀಯ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಾವು ಯಾವಾಗಲೂ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ರಾಜಕೀಯ ಮಾಡದೆ ಸಾಮಾಜಿಕ ಹಾಗೂ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಇಲ್ಲಿಯ ಜನತೆ ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯ ಮಾಡುತ್ತಲೇ ಸಮಾಜಕ್ಕೆ ಮಾದರಿಯಾಗಿದ್ದೇವೆ. ಹಲವು ವರ್ಷಗಳಿಂದ ನಾವು ಯಾವೊಬ್ಬ ಕಾರ್ಯಕರ್ತನಿಗೂ ರಾಜಕೀಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಕಲಿಸಿಲ್ಲ, ಚುನಾವಣೆಯ ನಂತರ ಅಭಿವೃದ್ಧಿಯ ರಾಜಕಾರಣ ಮಾಡಬೇಕು. ಕ್ಯಾಬಿನೆಟ್ ಮಂತ್ರಿ ಆದೆವು, ಆದರೆ ಯಾವುದೇ ಸರ್ಕಾರಿ ಅಧಿಕಾರಿಯ ಮೇಲೆ ಒತ್ತಡ ಹೇರಿಲ್ಲ . ಆದರೆ ಈಗಿನ ಪರಿಸ್ಥಿತಿಯನ್ನು ನೋಡಿ ಸರ್ಕಾರಿ ಅಧಿಕಾರಿಗಳು ಗೃಹ ಹವನ, ಪೂಜಾ ವಿಧಿ-ವಿಧಾನಗಳ ನಂತರ ಉತ್ತರ ಪೂಜೆಗೂ ಮುನ್ನವೇ ಸರ್ಕಾರಿ ಕಟ್ಟಡವೊಂದಕ್ಕೆ ಸೀಲ್ ಹಾಕಿದ್ದು , ನೋವನ್ನು ಉಂಟು ಮಾಡಿದೆ ಎಂದರು.
ಬಿಜೆಪಿ ಮುಖಂಡ ಬಂಟಿ ಪಾಟೀಲ ಸ್ವಾಗತಿಸಿ, ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡ ನಿರ್ಮಾಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಬಾಳಾಸಾಹೇಬ ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿಗ್ವಿಜಯ ಪಾಟೀಲ, ಯಶವಂತ ಕಾಂಬಳೆ ಬಾಳಾಸಾಹೇಬ ಪಾಟೀಲ , ಹಲಸುಗಾರ ಅಧ್ಯಕ್ಷ ಎಂ.ಪಿ.ಪಾಟೀಲ ಮಾತನಾಡಿದರು.
ಗ್ರಾಂ.ಪಂ. ಸದಸ್ಯರಾದ ಸೋನಾಲ್ ನಿಂಬಾಳ್ಕರ್, ಅಶೋಕ ಐವಾಳೆ, ಶಾರದಾ ನಾಯಿಕ್, ಮೀನಾಕ್ಷಿ ಸುತಾರ್, ವಿದ್ಯಾಧರ ಪಾಟೀಲ್, ಸಿದ್ರಾಮ ಪೂಜಾರಿ, ಹಲಸುಗಾರ ಉಪಾಧ್ಯಕ್ಷ ಪವನ ಪಾಟೀಲ್, ನಿರ್ದೇಶಕ ಸಮಿತ ಸಾಸನೆ , ರಾಮಗೊಂಡ ಪಾಟೀಲ ಜಯವಂತ ಭಾಟ್ಲೆ, ರಾಜು ಗುಂದೇಶಾ , ಕಾವೇರಿ ಮಿರ್ಜೆ , ಸಂತೋಷ ಸಂಗಾವಕರ ಕಿರಣ ನಿಕಾಡೆ, ಸುನೀಲ ವಡಗಾವೆ, ಮಧುಕರ ಪಾಟೀಲ, ಸುರೇಶ ಪೊವಾರ, ಮುಕುಂದ ಪಾಟೀಲ, ನಾಮದೇವ ಪಾಟೀಲ, ಬಾವುಸಾಹೇಬ ಕದಂ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ