ಪಂಚರಾಜ್ಯ ಚುನಾವಣೆ: ಕೆಲ ಕುತೂಹಲಕಾರಿ ಸಂಗತಿಗಳು

 

ಅತೀ ಹೆಚ್ಚು ಅತೀ ಕಡಿಮೆ ಮತಗಳ ಅಂತರ ಯಾರದ್ದು ?

 

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ –  ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದ್ದು ಉಳಿದೆಡೆಯೂ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಪಂಜಾಬ್‌ನಲ್ಲಿ ಆಪ್ ಎದುರು ಕಾಂಗ್ರೆಸ್ ಧೂಳಿಪಟವಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸುನಾಮ್ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಮನ್ ಅರೋರಾ ಅವರು ೭೫೨೭೭ ಮತಗಳ ಅಂತರದಿಂದ ಕಾಂಗ್ರೆಸ್‌ನ ಜಸ್ವಿಂದರ್ ಸಿಂಗ್ ಧಿಮನ್ ಅವರನ್ನು ಸೋಲಿಸಿದ್ದಾರೆ. ಇದು ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದ ಗೆಲುವಾಗಿದೆ.

ಇನ್ನು ಅತೀ ಕಡಿಮೆ ಅಂತರದ ಜಯ ಕೂಡ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯೇ ದಾಖಲಿಸಿದ್ದಾರೆ. ಜಲಂಧರ್ ಸೆಂಟ್ರಲ್ ಕೇತ್ರದಿಂದ ರಮಣ್ ಅರೋರಾ ಅವರು ೨೪೭ ಮತಗಳ ಅಂತರದಿಂದ ಕಾಂಗ್ರೆಸ್‌ನ ರಾಜಿಂದರ್ ಬೇರಿ ಅವರನ್ನು ಸೋಲಿಸಿದ್ದಾರೆ. ಇದು ಪ್ರಸಕ್ತ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದ ಗೆಲುವಾಗಿದೆ.

ಗೋವಾದಲ್ಲಿ

ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಪೋರಿಯೆಮ್ ಮತಕ್ಷೇತ್ರದಿಂದ ಬಿಜೆಪಿಯ  ದೇವಿಯಾ ವಿಶ್ವಜಿತ್ ರಾಣೆ ಅವರು ೧೩,೯೪೩ ಮತಗಳ ಅಂತರದಿಂದ ಆಮ್ ಆದ್ಮಿ ಪಾರ್ಟಿಯ ವಿಶ್ವಜಿತ್ ಕೃಷ್ಣರಾವ್ ರಾಣೆ ವಿರುದ್ಧ ಗೆಲುವು ಸಾಧಿಸಿದ್ದು, ಇದು ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದ ಗೆಲುವಾಗಿದೆ.

ವಾಳಪೈ ಕ್ಷೇತ್ರದಿಂದ ದೇವಿಯಾ ಅವರ ಪತಿ ವಿಶ್ವಜೀತ್ ರಾಣೆ ಬಿಜೆಪಿಯಿಂದ ಜಯಸಾಧಿಸಿದ್ದಾರೆ.

ಇನ್ನು ಸೇಂಟ್ ಆಂಡ್ರೆ ಮತಕೇತ್ರದಿಂದ ರೆವಲ್ಯೂಷನರಿ ಗೋವನ್ ಪಾರ್ಟಿಯ ವೀರೇಶ್ ಬೋರ್ಕರ್ ಅವರು ಬಿಜೆಪಿಯ ಫ್ರಾನ್ಸಿಸ್ಕೋ ಸಿಲ್ವೇರಿಯಾ ವಿರುದ್ಧ ೭೬ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯ ಅತೀ ಕಡಿಮೆ ಮತಗಳ ಅಂತರದ ಗೆಲುವಾಗಿದೆ. ಇನ್ನು ಎರಡನೇ ಅತೀ ಕಡಿಮೆ ಮತಗಳ ಅಂತರದ ಗೆಲುವನ್ನು (೭೭ ಮತಗಳ) ಬಿಜೆಪಿಯ ರವಿ ನಾಯ್ಕ ಸಾಧಿಸಿದ್ದಾರೆ.

ರಾಜನಾಥ್ ಸಿಂಗ್ ಪುತ್ರನ ದಾಖಲೆ ಗೆಲುವು ; ಅಖಿಲೇಶ್‌ಗೆ ಕರ‍್ಹಾಲ್‌ನಲ್ಲಿ ಮೊದಲ ಜಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button