Latest

ಬಾಲಕಿ ಮೇಲೆ ಅತ್ಯಾಚಾರ; ಕೊಲೆಗೈದು ಸುಟ್ಟುಹಾಕಿದ ಕಾಮುಕರು ಹೇಳಿದ್ದೇನು ಗೊತ್ತೆ?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಸುಟ್ಟು ಹಾಕಿರುವ ಅಮಾನುಷ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

9 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಿಗಳು ಬಳಿಕ ಆಕೆಯನ್ನು ಬೀಕರವಾಗಿ ಕೊಲೆಗೈದು ಮೃತದೇಹವನ್ನು ಸುಟ್ಟುಹಾಕಿದ್ದಾರೆ. ದೆಹಲಿಯ ಕಂಟೋನ್ಮೆಂಟ್ ಏರಿಯಾದ ನಂಗಲ್ ಗ್ರಾಮದಲ್ಲಿ ನಡೆದಿದೆ.

ಕೃತ್ಯದ ಬಳಿಕ ಆರೋಪಿಗಳು ಬಾಲಕಿ ಪೋಷಕರಿಗೆ ವಿದ್ಯುತ್ ಶಾಕ್ ನಿಂದ ಬಾಲಕಿ ಸಾವನ್ನಪ್ಪಿದ್ದು, ದೇಹ ಸುಟ್ಟುಕರಕಲಾಗಿದೆ ಎಂದು ತಿಳಿಸಿದ್ದಾರೆ.

ಸ್ಮಶಾನದಲ್ಲಿರುವ ವಾಟರ್ ಕೂಲರ್ ನಿಂದ ಕೋಲ್ಡ್ ವಾಟರ್ ತರಲೆಂದು ಬಾಲಕಿ ತೆರಳಿದ್ದ ವೇಳೆ ಕಾಮುಕರು ಬಾಲಕಿ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾರೆ. ಬಳಿಕ ಬಾಲಕಿ ಪೋಷಕರಿಗೆ ಮಗಳು ಕುಡಿಯುವ ನೀರು ತೆಗೆಯುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಅನುಮಾನಗೊಂಡ ಪೋಷಕರು ಗ್ರಾಮಸ್ಥರೊಂದಿಗೆ ಪೊಲೀಸರಿಗೆ ದೂರು ನೀಡಿದ್ದು, ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಘಟನೆ ಬೆಳಕಿಗೆ ಬಂದಿದೆ. ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Home add -Advt

ಸೇನಾ ಹೆಲಿಕಾಪ್ಟರ್ ಭೀಕರ ದುರಂತ

Related Articles

Back to top button