Latest

SSLC ಪರೀಕ್ಷೆಯಲ್ಲಿ ಹಿಜಾಬ್‌ಗೆ ಅವಕಾಶ :7 ಶಿಕ್ಷಕರ ಅಮಾನತು

 

ಪ್ರಗತಿವಾಹಿನಿ ಸುದ್ದಿ,  ಗದಗ:  ಎಸ್ಸೆಸ್ಸೆಲ್ಸಿ   ಪರೀಕ್ಷೆಯಲ್ಲಿ ಮೊದಲ ದಿನ ಹಿಜಾಬ್ ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಅನುಮತಿ ನೀಡಿದ್ದ ಪರೀಕ್ಷಾ ಮುಖ್ಯ ಅಧೀಕ್ಷಕರು ಸೇರಿ ಏಳು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಡಿಡಿಪಿಐ ಬಸವಲಿಂಗಪ್ಪ ಈ ವಿಷಯ ತಿಳಿಸಿದ್ದಾರೆ.

ಸಿ.ಎಸ್. ಪಾಟೀಲ ಬಾಲಕರ ಪ್ರೌಢಶಾಲೆ ಕೇಂದ್ರದ ಮುಖ್ಯ ಅಧೀಕ್ಷಕ ಕೆ.ಬಿ. ಭಜಂತ್ರಿ, ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ ಕೆಂದ್ರದ ಮುಖ್ಯ ಅಧೀಕ್ಷಕಿ ಬಿ.ಎಸ್. ಹೊನಗುಂಡಿ, ಕೊಠಡಿ ಮೇಲ್ವಿಚಾರಕರಾದ ಎಸ್.ಯು. ಹೊಕ್ಕಳದ, ಎಸ್.ಎಂ. ಪತ್ತಾರ, ಎಸ್.ಜಿ. ಗೋಡಕೆ, ಎಸ್.ಎಸ್. ಗುಜಮಾಗಡಿ, ವಿ.ಎನ್. ಕಿವುಡರ ಅವರನ್ನು ಅಮಾನತು ಮಾಡಲಾಗಿದೆ.

Home add -Advt

ಗದಗ ನಗರದ ಸಿ.ಎಸ್. ಪಾಟೀಲ ಬಾಲಕರ ಹಾಗೂ ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದ ಎರಡು ಕೊಠಡಿಗಳಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆದ ವಿಡಿಯೋ ವೈರಲ್ ಆಗಿತ್ತು.

Related Articles

Back to top button