ಪ್ರಗತಿವಾಹಿನಿ ಸುದ್ದಿ; ಉಡುಪಿ: ಹೈಕೋರ್ಟ್ ತೀರ್ಪಿನ ಬಳಿಕವೂ ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ನಮಗೆ ಹಿಜಾಬ್ ಬೇಕು, ಹೈಕೋರ್ಟ್ ತೀರ್ಪು ಆಘಾತತಂದಿದೆ ಹೋರಾಟ ಮುಂದುವರೆಸುತ್ತೇವೆ ಎಂದು ಅರ್ಜಿದಾರ ಮುಸ್ಲೀಮ್ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಐವರು ಮುಸ್ಲೀಂ ವಿದ್ಯಾರ್ಥಿನಿಯರು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹೈಕೋರ್ಟ್ ತೀರ್ಪು ನಮ್ಮ ವಿರುದ್ಧ ಬಂದಿದೆ. ನಾವು ಹಿಜಾಬ್ ಗಾಗಿ ಮೊದಲೆ ಅರ್ಜಿ ಸಲ್ಲಿಸಿದ್ದೆವು. ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಸಮವಸ್ತ್ರ ಕಡ್ಡಾಯ, ಏನೇನೋ ವಿವಾದ ಹೀಗೆ ಬೇರೆ ವಿಚಾರಳು ಆರಂಭವಾದವು. ಆದರೂ ಕೋರ್ಟ್ ಮೇಲೆ ನಮಗೆ ಬಹಳ ನಿರೀಕ್ಷೆ ಇತ್ತು. ಆದರೆ ತೀರ್ಪು ಆಘಾತ ತಂದಿದೆ. ನಮ್ಮ ದೇಶದಲ್ಲಿಯೇ ನಮಗೆ ಅನ್ಯಾಯವಾದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಕಾನೂನು ಹಾಗೂ ಸಂವಿಧಾನದ ಮೇಲೆ ನಂಬಿಕೆ ಇದೆ. ಹಿಜಾಬ್ ಹಾಗೂ ಶಿಕ್ಷಣ ಎರಡೂ ಕೂಡ ನಮಗೆ ಮುಖ್ಯ. ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಸುತೇವೆ. ಹೈಕೋರ್ಟ್ ರಾಜಕೀಯ ಒತ್ತಡದಿಂದ ತೀರ್ಪು ನೀಡಿದಂತಿದೆ. ಕೋರ್ಟ್ ಮೇಲೂ ಒತ್ತಡ ಹಾಕಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ತರಗತಿಗೆ ಹೋಗಲ್ಲ. ಹಿಜಾಬ್ ನಮ್ಮ ಹಕ್ಕು. ಕುರಾನ್ ನಲ್ಲಿ ಹಿಜಾಬ್ ಬಗ್ಗೆ ಉಲೇಖವಿದೆ. ಆದರೆ ಕೋರ್ಟ್ ತೀರ್ಪಿನಲ್ಲಿ ಕುರಾನ್ ನಲ್ಲಿ ಉಲ್ಲೇಖವಿಲ್ಲ ಎಂದು ಹೇಳಿರುವುದು ತಪ್ಪು. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತೇವೆ. ಪರಿಕ್ಷೆ ಬರೆಯಲು ಕೂಡ ನಾವು ತಯಾರಿ ನಡೆಸಿದ್ದೇವೆ. ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಹೇಳಿದರು.
ನಮಗೆ ಹಿಜಾಬ್ ತೆಗೆದು ಕ್ಲಾಸಿಗೆ ಬರುವಂತೆ ಒತ್ತಡ ಹೇರಿದ್ದರಿಂದ ಇಂದು ರಾಜ್ಯದ ಅದೆಷ್ಟು ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಅಡ್ದಿಯುಂಟಾಗುತ್ತಿದೆ. ಅನೇಕ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ರಾಜಕೀಯಕ್ಕಾಗಿ ಏಕಾಏಕಿ ಹಾಜಾಬ್ ಧರಿಸಬಾರದು ಎಂದು ಕಾಲೇಜಿನಲ್ಲಿ ರೂಲ್ಸ್ ಮಾಡಿದ್ದು ಸರಿಯಲ್ಲ. ನಾವು ಮೊದಲಿನಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದೇವೆ. ನಮಗೆ ಧರ್ಮ ಹಾಗೂ ಶಿಕ್ಷಣ ಎರಡೂ ಮುಖ್ಯ ಎಂದು ಹೇಳಿದ್ದಾರೆ.
ಹಿಜಾಬ್ ತೀರ್ಪು; 4 ಪ್ರಶ್ನೆಗಳಿಗೆ 4 ಉತ್ತರ ; ಹೈಕೋರ್ಟ್ ಪರಿಗಣಿಸಿದ ಮಹತ್ವದ ಅಂಶಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ