ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕುಂದಾಪುರ, ಉಡುಪಿ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಮತೀಯ ಸಂಘಟನೆಗಳ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ನಾವೆಲ್ಲ ಭಾರತಾಂಬೆ ಮಕ್ಕಳೆಂಬ ಸಂಸ್ಕಾರ ವಿದ್ಯಾರ್ಥಿಗಳಲ್ಲಿರಬೇಕು. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವುದು ಧರ್ಮಾಚರಣೆಗಲ್ಲ, ಜ್ಞಾನಾರ್ಜನೆಗೆ ಎಂಬ ಅರಿವಿರಬೇಕು. ಧರ್ಮ ಆಚರಣೆ, ಪೂಜೆ ಪುನಸ್ಕಾರಕ್ಕೆ ಚರ್ಚ್, ಮಸೀದಿ, ದೇಗುಲಗಳಿವೆ, ಅಲ್ಲಿ ಏನು ಬೇಕಾದರೂ ಮಾಡಬಹುದು. ಅಲ್ಲಿ ನಾವು ಸ್ವತಂತ್ರರು. ಆದರೆ ಶಾಲೆಗಳಲ್ಲಿ ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯಬೇಕು ಎಂದು ಹೇಳಿದರು.
ಹಿಜಾಬ್ ಹಿಂದಿನ ಮತೀಯ ಸಂಘಟನೆಗಳ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ದೇಶದ ಒಗ್ಗಟ್ಟಿಗೆ ಅಡ್ಡಿಯಾಗುವುದನ್ನು ಸರಿಪಡಿಸಬೇಕು. ಯಾವುದೇ ಧರ್ಮಿಯರು ಧರ್ಮಾಚರಣೆಗೆ ಶಾಲೆಗೆ ಬರುವುದಿಲ್ಲ. ಭಾರತಾಂಬೆ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು. ಶಾಲೆಯ ಆವರಣದ ಒಳಗೆ ಹಿಜಾಬ್, ಹಸಿರು ಶಾಲು, ಕೇಸರಿ ಶಾಲು ಯಾರೂ ಧರಿಸುವಂತಿಲ್ಲ. ವಿದ್ಯಾರ್ಥಿಗಳು ಶಾಲೆ ಮ್ಯಾನೇಜ್ಮೆಂಟ್ ಹೇಳಿದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದಾರೆ.
ಹಿಜಾಬ್ V/S ಕೇಸರಿ ಶಾಲು; ಕಾಲೇಜು ವಿದ್ಯಾರ್ಥಿಗಳನ್ನು ತಡೆದ ಪ್ರಾಂಶುಪಾಲರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ