ಪ್ರಗತಿವಾಹಿನಿ ಸುದ್ದಿ; ಶೀಮ್ಲಾ: ಚಳಿಗಾಲದ ಬೆನ್ನಲ್ಲೇ ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುವ ಭೀತಿ ಎದುರಾಗಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಮಾಸ್ಕ್ ಧರಸದವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಮಾಸ್ಕ್ ಧರಿಸದೇ ಓಡಾಡುವವರನ್ನು ವಾರಂಟ್ ಇಲ್ಲದೇ ಬಂಧಿಸಬಹುದು. ಇಲ್ಲವೇ 8 ದಿನಗಳ ಕಾಲ ಜೈಲುಶಿಕ್ಷೆ ಅಥವಾ 5,000 ರೂ ವರೆಗೆ ದಂಡ ವಿಧಿಸಬಹುದು ಎಂದು ಹಿಮಾಚಲ ಪ್ರದೇಶದ ಸಿಮೌರ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ