ಪ್ರಗತಿವಾಹಿನಿ ಸುದ್ದಿ; ಶಿಮ್ಲಾ: ಉತ್ತರಾಖಂಡದಂತೆಯೇ ಹಿಮಾಚಲ ಪ್ರದೇಶದಲ್ಲಿಯೂ ಭೂ ಕುಸಿತ ಸಂಭವಿಸುವ ಆತಂಕ ಎದುರಾಗಿದೆ.
ಹಿಮಾಚಲ ಪ್ರದೇಶದ ಮಂಡಿಯ ಶಲಾನಲ್ ಗ್ರಾಮದಲ್ಲಿ ಚತುಷ್ಪಥ ಹೆದ್ದಾರಿಗಾಗಿ ಬೆಟ್ಟವನ್ನು ಕೊರೆಯುತ್ತಿರುವುದರಿಂದ ಹತ್ತಿರದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದಾಗಿ ಹಳ್ಳಿಗರು ಹೇಳಿದ್ದಾರೆ. ಇಡೀ ಊರೇಗೆ ಊರೆ ಭಯದಲ್ಲಿ ಬದುಕುತ್ತಿದ್ದು, ಭೂಕುಸಿತದ ಆತಂಕ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಬೆಟ್ಟದ ರಾಜ್ಯಗಳಲ್ಲಿ ತೀವ್ರ ಅಭಿವೃದ್ಧಿಯ ನಿರ್ಮಾಣಗಳು ಆಗುತ್ತಿದ್ದು ಪ್ರಕೃತಿ ಮತ್ತು ಮಾನವಾಭಿವೃದ್ಧಿಯ ನಡುವಣ ಸಮತೋಲನ ತಪ್ಪಿದೆ. ಜೋಶಿಮಠದ ಗತಿ ಹಿಮಾಚಲ ಪ್ರದೇಶದಲ್ಲೂ ಕಾದಿದೆ. ಈ ಕೊರೆಯುವ ಚಳಿಯಲ್ಲಿ ಮಂಡಿಯ ಮೂರು ಗ್ರಾಮಗಳ ಜನರು ಮನೆ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಂಡಿಯ ದರಾಂಗ್ ವಿಧಾನ ಸಭಾ ಕ್ಷೇತ್ರದ ಬಾಲಿಚೌಕಿ, ಬಟ್ವಾಡಿ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಮನಾಲಿ ಚಂಡೀಗಡ ರಸ್ತೆಯನ್ನು ಚತುಷ್ಪಥ ಮಾಡುತ್ತಿರುವುದೇ ಸಮಸ್ಯೆಗೆ ಮೂಲ ಎನ್ನಲಾಗಿದೆ.
ಕಿನೌರ್ ಮತ್ತು ಲಾಹೌಲ್ ಸ್ಪಿತಿ ಜಿಲ್ಲೆಗಳ 30% ಪ್ರದೇಶಗಳು ಮೋಡ ಸಿಡಿತ ಇಲ್ಲವೇ ಮೇಘ ಸ್ಫೋಟದ ಅಪಾಯದಲ್ಲಿವೆ ಎಂದು ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದರು. ಈಗ ಜೋಶಿಮಠ ಮಾದರಿಯ ಬಿರುಕುಗಳ ವರದಿಗಳು ಬರುತ್ತಿವೆ.
ಉತ್ತರಾಖಂಡದ ತೆಹ್ರಿ ಗರ್ಹ್ವಾಲ್ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿದೆ, ಹಲವೆಡೆ ಭೂಕುಸಿತವಾಗಿದೆ. ಚಂಬಾ ಸುರಂಗದ ಮೇಲು ಭಾಗದ ಮನೆಗಳಲ್ಲಿ ಬಿರುಕು ಕಾಣಿಸಿದ್ದು ಹಲವು ಮನೆಗಳಳು ಒದಕು ಬಿಟ್ಟಿವೆ. ಚಂಬಾದಲ್ಲಿ 440 ಮೀಟರ್ ಉದ್ದದ ಸುರಂಗ ಕೊರೆಯಲಾಗಿದೆ ಸುರಂಗ ತೆಗೆದಿರುವುದೇ ಮನೆಗಳ ಗೋಡೆ ಬಿರುಕು ಬಿಡಲು ಕಾರಣವಾಗಿದೆ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಆಲಿಗಡದ ಕನ್ವರಿಗಂಜ್ ಪ್ರದೇಶದ ಹಲವು ಮನೆಗಳಲ್ಲಿ ಏಕಾಏಕಿ ಬಿರುಕು ಕಾಣಿಸಿಕೊಂಡಿದ್ದು, ಜನರು ಇನ್ನಷ್ಟು ಆತಂಕಕೀಡಾಗಿದ್ದಾರೆ.
*ಪರಿಶೀಲನೆ ನೆಪದಲ್ಲಿ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಹಣ ಸುಲಿಗೆ ಮಾಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್*
https://pragati.taskdun.com/two-policesuspendedbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ