ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳವಾರ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ವಿದೇಶಗಳಲ್ಲಿ ಹಿಂದೂಗಳು ಮತ್ತು ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಆಗ್ರಹಿಸುವುದು ಒಂದು ಕಾರಣವಾದರೆ, ಮತಾಂತರ ತಡೆ, ಲವ್ ಜಿಹಾದ್ ತಡೆ ಮತ್ತು ಬೆಳಗಾವಿ ತಾಲೂಕಿನ ರಣಕುಂಡೆಯಲ್ಲಿ ಮುಸ್ಲಿಂರು ಹಿಂದೂ ಮಂದಿರವೊಂದನ್ನು ಧ್ವಂಸ ಮಾಡಿ, ಆ ಊರಿನ ಜನರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಮತ್ತಿತರ ಕಾರಣ.
ಶ್ರೀ ಗುರುಸಿದ್ಧ ಮಹಾಸ್ವಾಮೀಜಿಗಳು ಕಾರಂಜಮಠ, ಶ್ರೀ ಗಂಗಾಧರ ಸ್ವಾಮೀಜಿಗಳು ಸಿಧ್ಧನಕೊಳ್ಳ, ಶ್ರೀಕಾಂತ ಕದಂ ಜಿಲ್ಲಾ ಅಧ್ಯಕ್ಷರು, ಕ್ರಷ್ಣಭಟ್ ಸಹ ಕೋಶಾಧ್ಯಕ್ಷರು ಕರ್ನಾಟಕ ಉತ್ತರ ವಿಶ್ವ ಹಿಂದೂಪರಿಷದ್ , ಡಾ ಭಾಗೋಜಿ ನಗರ ಅಧ್ಯಕ್ಷರು, ವಿಜಯ ಜಾಧವ ಜಿಲ್ಲಾ ಸೆಕ್ರೇಟರಿ, ಭಾವಕಣ್ಣ ಲೋಹಾರ ಜಿಲ್ಲಾ ಬಜರಂಗದಳ ಸಂಯೋಜಕ, ಆದಿನಾಥ ಗಾವಡೆ ನಗರ ಬಜರಂಗದಳ ಸಂಯೋಜಕ ಮತ್ತು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಭಗವಾ ಧ್ವಜದೊಂದಿಗೆ ಭಾರತ ಮಾತಾಕಿ ಜೈ, ಬಾಂಗ್ಲಾದೇಶ ಮುರ್ದಾಬಾದ್ ಘೋಷಣೆಯೊಂದಿಗೆ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಅರ್ಪಿಸಿದರು.
ಮನವಿಯ ಪೂರ್ಣ ಪಾಠ ಇಲ್ಲಿದೆ:
1. ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಉಳಿದಿರುವ ಅಲ್ಪಸಂಖ್ಯಾತ ಹಿಂದೂ-ಸಿಬ್ಬರ ವಿರುದ್ಧದ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಬಾಂಗ್ಲಾದೇಶದಲ್ಲಿ ಕಳೆದ ಒಂದು ವಾರದಲ್ಲಿ, ಮಿತಿಮಿರಿ ಅತ್ಯಾಚಾರಗಳು ನಡೆಯುತ್ತವೆ. ಅಲ್ಲಿ ಹಿಂದೂಗಳ ಜೀವಗಳನ್ನು ಉಳಿಸಲಾಗುತ್ತಿಲ್ಲ. ಅಥವಾ ಅವರ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವವನ್ನು ಕಾಪಾಡಲಾಗುತ್ತಿಲ್ಲ. ಅಥವಾ ಮಾ ದುರ್ಗಾ ಪೂಜೆಯ ಮಂಟಪಗಳನ್ನು ಅಥವಾ ಹಿಂದೂ ದೇವಾಲಯವನ್ನು ರಕ್ಷಿಸಲಾಗುತ್ತಿಲ್ಲ.
ಬಲವಂತವಾಗಿ ದೇವಸ್ಥಾನಗಳಿಗೆ ಪ್ರವೇಶಿಸುವ ಮೂಲಕ ದೇವರ ವಿಗ್ರಹಗಳನ್ನು ಮುರಿಯುವುದು, ಅವುಗಳನ್ನು ನಿರ್ಧಯವಾಗಿ ಹೊಡೆದು ಹಾಕುವುದು, ಚಿಕ್ಕ ಹುಡುಗಿಯರ ಮೇಲೆ ಅತ್ಯಾಚಾರ ಮಾಡುವುದು, ಕೊಲ್ಲುವುದು, ಲೂಟಿ ಮಾಡುವುದು, ಸುಡುವುದು ಮುಂತಾದ ಯಾವುದೇ ದುಷ್ಪ ಕೃತ್ಯವನ್ನು ಇಸ್ಲಾಮಿಕ್ ಜಿಹಾದಿಗಳು ಬಿಡಲಿಲ್ಲ. ಅಫ್ಘಾನಿಸ್ತಾನವನ್ನು ಬಾರ್ಬರ ತಾಲಿಬಾನ್ ಆಳಿದಾಗಿನಿಂದ, ಇತರ ನೆರೆಯ ದೇಶಗಳಲ್ಲಿ ಜಿಹಾದಿ ಉಗ್ರರ ದಾಳಿಗಳು ನಿರಂತರವಾಗಿ ಹೆಚ್ಚುತ್ತಿವೆ.
ಕೇವಲ ದುರ್ಗಾ ಪೂಜೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ೨೨ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ಹೆಚ್ಚಾಗಿದೆ. ಹಿಂದುಗಳ ೧೫೦ ಕ್ಕೂ ಹೆಚ್ಚು ದುರ್ಗಾ ಪೂಜಾ ಪೆಂಡಾಲ್‌ಗಳನ್ನು ಅಪವಿತ್ರಗೊಳಿಸಲಾಯಿತು ಮತ್ತು ನಾಶಪಡಿಸಲಾಯಿತು. ಅದು ನೊಖಾಲಿಯಲ್ಲಿರುವ ಇಸ್ಕಾನ್ ದೇವಸ್ಥಾನ ಅಥವಾ ಡಾಕಾದ ಡಾಕೇಶ್ವರಿ ದೇವಸ್ಥಾನ, ಬಂದರ್‌ಬನ್‌ನ ಲಾಮಾ ಹರಿ ದೇವಸ್ಥಾನ ಅಥವಾ ಚಾಂದ್‌ಪುರದ ಶ್ರೀ ರಾಮ ಕೃಷ್ಣ ಮಿಷನ್ ಆಶ್ರಮ, ಚೌಮುಹಾನಿಯಲ್ಲಿನ ರಾಮತಾಕೂರ್ ಆಶ್ರಮ ಅಥವಾ ಚೌಕ್ ಬಜಾರ್‌ನ ಕರುಣಾಮಾಯಿ ಕಾಳಿ ದೇವಸ್ಥಾನ ಅಥವಾ ಕುರಿಗ್ರಾಮದ ಇತರ ಏಳು ದೇವಾಲಯಗಳು, ಈ ಪಟ್ಟಿ ತುಂಬಾ ಉದ್ದವಾಗಿದೆ. ಅನೇಕ ಮನೆಗಳಲ್ಲಿ, ಅಂಗಡಿಗಳಲ್ಲಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ, ಹಿಂಸೆ, ಬೆಂಕಿ ಹಚ್ಚುವಿಕೆ ಮತ್ತು ಲೂಟಿಯ ಆಕ್ರಂದನ ಮುಗಿಲು ಮುಟ್ಟಿತ್ತು, ಏನನ್ನೂ ಹೇಳಲಾಗದ ೧೦-೧೨ ಹಿಂದುಗಳು ಪ್ರಾಣ ಕಳೆದುಕೊಂಡರು. ದೇವತೆಗಳ ವಿಗ್ರಹಗಳನ್ನು ಮುರಿಯಲಾಯಿತು. ಹಿಂದುಗಳನ್ನು ಹೊಡೆದರು. ತಾಯಂದಿರು ಮತ್ತು ಸಹೋದರಿಯರ ಗೌರವದೊಂದಿಗೆ ಚೆಲ್ಲಾಟವಾಡಲಾಯಿತು. ಇಷ್ಟೆಲ್ಲಾ ಆದ ನಂತರವೂ ಬಾಂಗ್ಲಾದೇಶ ಸರ್ಕಾರ ಕುರುಡಾಗಿ ಕುಳಿತಿದೆ.
ಈ ಭಯಾನಕ ಹಗರಣಗಳನ್ನು ನೋಡಿ ಹಿಂದುಗಳ ಕೋಪ ಹೆಚ್ಚುತ್ತಿದೆ. ವಿಶ್ವ ಹಿಂದೂ ಪರಿಷತ್ ಬಾಂಗ್ಲಾದೇಶ ಸರ್ಕಾರದಿಂದ ಹಿಂದೂಗಳ ಮೇಲಿನ ದಾಳಿಗಳು ಮತ್ತು ದೌರ್ಜನ್ಯಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ ಮತ್ತು ಈ ಘಟನೆಗಳನ್ನು ನಿಲ್ಲಿಸುವಂತೆ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲು ಭಾರತ ಸರ್ಕಾರವನ್ನು ವಿನಂತಿಸುತ್ತದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಮತ್ತು ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರಲು ನಾವು ನಿಮ್ಮನ್ನು ವಿನಂತಿಸುತ್ತೇವೆ:
* ಬಳಲುತ್ತಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ನ್ಯಾಯ ಮತ್ತು ಭದ್ರತೆ
* ಜೀವ ಮತ್ತು ಆಸ್ತಿ ನಷ್ಟಕ್ಕೆ ಸರಿಯಾದ ಪರಿಹಾರ.
* ದಾಳಿ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.
* ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
* ಉಳಿದ ಹಿಂದುಗಳ ಮಾನವ ಹಕ್ಕುಗಳ ರಕ್ಷಣೆ ಮತ್ತು ಬದುಕುವ ಹಕ್ಕಿನ ಅಧಿಕಾರ ಸಿಗಬೇಕು.
2. ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತ ಧರ್ಮೀಯರು ಅವ್ಯಾಹತವಾಗಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ. ಅಮಾಯಕ ಮತ್ತು ಮುಗ್ಧ ಜನತೆಯ ತಲೆಯಲ್ಲಿ ಭಾವನಾತ್ಮಕವಾದ ವಿಷಯಗಳನ್ನು ತುಂಬಿ ಅವರನ್ನು ಮತಾಂತರ ಮಾಡುವ ಹುನ್ನಾರ ಹಗಲಿರುಳು ಸಾಗುತ್ತಿದೆ.
3. ಹಿಂದೂ ಹೆಣ್ಣು ಮಕ್ಕಳನ್ನು ಹಾಳು ಮಾಡುವ ದೃಷ್ಟಿಯಿಂದ ಮುಸ್ಲಿಂ ಯುವಕರು ಲವ್ ಜಿಹಾದ್ ಮಾಡುತ್ತಿರುವ ಪ್ರಕರಣಗಳು ವಿಪರೀತವಾಗಿ ಬೆಳೆಯುತ್ತಿವೆ. ಹಿಂದೂ ಕುಟುಂಬದ ಹೆಣ್ಣು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಈ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ. ಈ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಬಹಳಷ್ಟಿದೆ.
4. ಬೆಳಗಾವಿ ಸಮೀಪದ ರಣಕುಂಡೆ ಗ್ರಾಮದಲ್ಲಿ ಮುಸ್ಲಿಂರು ಹಿಂದೂ ಮಂದಿರವೊಂದನ್ನು ಧ್ವಂಸ ಮಾಡಿ, ಆ ಊರಿನ ಜನರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗಾವಿ ನಗರದ ಕೆಲವು ಮುಸ್ಲಿಂರು ಊರಿನ ಯುವಜನರ ಮೇಲೆಯೇ ಪೊಲೀಸ್ ಕೇಸು ದಾಖಲು ಮಾಡಿದ್ದಾರೆ. ಅದಕ್ಕಾಗಿ ನಿಷ್ಪಕ್ಷಪಾತವಾದ ತನಿಖೆ ಮಾಡಿ, ಮಂದಿರವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಸ್ವಯಂಸೇಕಸಂಘ ಮತ್ತು ಪರಿವಾರದ ಎಲ್ಲಾ ಸಂಘಟನೆ ಪ್ರಮುಖರು ಭಾಗಿಯಾಗಿದ್ದರು.