Latest

ಯುವತಿಯ ಮತಾಂತರ; ಹೆಸರಾಂತ ವೈದ್ಯೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಹಿಂದೂ ಯುವತಿಗೆ ಕೆಲಸ ಹಾಗೂ ಹಣದ ಆಮಿಷವೊಡ್ಡಿ ಇಸ್ಲಾಂ ಗೆ ಮತಾಂತರಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ವೈದ್ಯೆ ಹಾಗೂ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿವಾನಿ ಎಂಬ ಯುವತಿಯನ್ನು ಇಸ್ಲಾಂ ಗೆ ಮತಾಂತರಗೊಳಿಸಿ ಆಯೇಷಾ ಎಂದು ಹೆಸರು ಬದಲಿಸಿದ್ದೂ ಅಲ್ಲದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ಮಂಗಳೂರಿನ ಪಾಂಡವೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ಎಂಬುವವರ ಪರಿಚಯವಾಗಿ ಅವರ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಮಂಗಳೂರಿನ ಪ್ರಸಿದ್ಧ ವೈದ್ಯೆ ಡಾ.ಜಮೀಲಾ ಅವರ ಮನೆಗೂ ಕೆಲಸಕ್ಕೆ ಹೋಗುತ್ತಿದ್ದೆ. ಅಲ್ಲಿ ಕುರಾನ್ ಓದಲು ಹೇಳಿ ನಮಾಜ್ ಮಾಡುವಂತೆ ಒತ್ತಾಯಿಸಿ ಮತಾಂತರಕ್ಕೆ ಯತ್ನಿಸಿದ್ದಾರೆ.

ತಾನು ಡಾ.ಜಮೀಲಾ ಮನೆ ಕೆಲಸಕ್ಕೆ ಸೇರಿದ ಬಳಿಕ ಖಲೀಲ್ ಕೂಡ ಅಲ್ಲಿ ಕೆಲಸಕ್ಕೆ ಸೇರಿದ್ದ. ಆತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಯುವತಿ ವಿಶ್ವಹಿಂದೂ ಪರಿಷತ್ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಗಳ ವಿರುದ್ಧ ಎಫ್ ಐ ಆರ್ ಅದಾಖಲಾಗಿದೆ.

Home add -Advt

ವೈದ್ಯೆ ಡಾ.ಜಮೀಲಾ, ಖಲೀಲ್, ಇಮಾಮ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 354, 354 (A) 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನಿ ಮೋದಿ ನಿಂದನೆ; ಕಾಂಗ್ರೆಸ್ ಶಾಸಕನ ವಿರುದ್ಧ ದೂರು ದಾಖಲು

https://pragati.taskdun.com/p-t-parameshwar-naikcopmlaint-filepm-narendra-modi/

Related Articles

Back to top button