
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಮೇರಿಕಾದಲ್ಲಿ ಆಯೋಜಿತ ಹಿಂದೂ ವಿರೋಧಿ “ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ” ಸಮ್ಮೇಳನ ರದ್ದುಗೊಳಿಸಲು ಆಗ್ರಹಿಸಿ ಕೇಂದ್ರ ಗೃಹ ಇಲಾಖೆಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಹಿಂದೂ ಜನಜಾಗೃತಿ ಸಮಿತಿ ಮತ್ತು ಅಖಿಲ ಭಾರತೀಯ ಹಿಂದೂ ಮಹಾಸಭಾದ ವತಿಯಿಂದ ‘ಡಿಸ್ಮೆಂಟಲಿಂಗ್ ಆಫ್ ಗ್ಲೋಬಲ್ ಹಿಂದುತ್ವ’ ಎಂಬ ಹಿಂದೂ ವಿರೋಧಿ ಅಂತರಾಷ್ಟ್ರೀಯ ಸಮ್ಮೇಳನದ ವಿರುದ್ಧ ಆಂದೋಲನವನ್ನು ನಡೆಸಿ ಈ ಬಗ್ಗೆ ಬೆಂಗಳೂರಿನ ಜಿಲ್ಲಾಧಿಕಾರಿಗಳ ಬಳಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಮ್ಮೇಳನದ ಮುಖ್ಯ ಉದ್ದೇಶ ಹಿಂದುತ್ವವನ್ನು ಜಾಗತಿಕ ಮಟ್ಟದಲ್ಲಿ ನಾಶಗೊಳಿಸುವುದಾಗಿದೆ. ಅಮೆರಿಕದಲ್ಲಿ ಆಯೋಜಿತವಾದ ಈ ಸಮ್ಮೇಳನವು ಸೆಪ್ಟೆಂಬರ್ 10,11,12 ರಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ಅರ್ಬನ್ ನಕ್ಸಲರು, ತುಕಡೇ ಗ್ಯಾಂಗ್, ಹಿಂದುತ್ವ ವಿರೋಧಿ ಲೇಖಕರು ಆಯೋಜಿಸಿದ್ದಾರೆ. ಈ ಕಾರ್ಯಕ್ರಮವನ್ನು ಹಿಂದೂ ಧರ್ಮದ ಅವಹೇಳನ, ಅಪಪ್ರಚಾರ ಹಾಗೂ ಅಪಹಾಸ್ಯ ಮಾಡುವ ಉದ್ದೇಶದಿಂದ ಆಯೋಜಿಸಲಾಗಿದ್ದು ವಸುದೈವ ಕುಟುಂಬಕಮ್ ಎಂಬ ಉದಾತ್ತ ಧ್ಯೇಯದಿಂದ ಯುಕ್ತವಾಗಿರುವ ಹಿಂದೂ ಧರ್ಮದ ತುಲನೆಯನ್ನು ಇಸ್ಲಾಮಿ ಭಯೋತ್ಪಾದಕರೊಂದಿಗೆ ಮಾಡಿ 2 ಒಂದೇ ಆಗಿದೆ ಎಂಬಂತೆ ತೋರಿಸುವ ಪ್ರಯತ್ನ ಇಲ್ಲಿ ಆಗುತ್ತಿದೆ.
ಸೆಪ್ಟೆಂಬರ್ 11ರಂದು ಅಮೇರಿಕಾದಲ್ಲಿ ತಾಲಿಬಾನಿಗಳಿಂದ ನಡೆದ ಮಾರಣಹೋಮಕ್ಕಾಗಿ ಬ್ಲಾಕ್ ಡೇಯನ್ನು ಆಚರಿಸಲಾಗುತ್ತದೆ. ಇಂದು ಅಪಘಾನಿಸ್ತಾನದಲ್ಲಿ ತಾಲಿಬಾನಿನಿಂದ ನಡೆಯುತ್ತಿರುವ ಅತ್ಯಾಚಾರಗಳಿಂದಾಗಿ ಜಗತ್ತು ಭಯೋತ್ಪಾದಕರ ವಿಷಯದಲ್ಲಿ ಸಿಡಿದೆದ್ದಿದೆ. ಈ ಸಮಯದಲ್ಲಿ ಜಗತ್ತಿನ ಗಮನವನ್ನು ಭಯೋತ್ಪಾದಕರಿಂದ ದೂರ ಸೆಳೆದು ಹಿಂದೂ ಧರ್ಮದ ಅವಹೇಳನ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದುದರಿಂದ ದಿ. 2.9.2021 ರಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಅಖಿಲ ಭಾರತೀಯ ಹಿಂದೂ ಮಹಾಸಭಾ ಭಾರತ ಸರಕಾರವು ರಾಜತಾಂತ್ರಿಕವಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಹಾಗೂ ಇದಕ್ಕೆ ಕಾರಣಕರ್ತರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿ ಬೆಂಗಳೂರಿನ ಜಿಲ್ಲಾಧಿಕಾರಿಗಳಾದ ಮಂಜುನಾಥ ಇವರಿಗೆ ಮನವಿಯನ್ನು ನೀಡಲಾಯಿತು.
ಹಾಗೆಯೇ ಈ ಮನವಿಯನ್ನು ಕೇಂದ್ರೀಯ ಗ್ರಹ ಮಂತ್ರಿಗಳಿಗೆ ತಲುಪಿಸಲು ಕೋರಲಾಗಿದೆ. ಈ ಸಮ್ಮೇಳನಕ್ಕೆ ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ಯೂನಿವರ್ಸಿಟಿ, ಹಾರ್ವರ್ಡ್ ಯೂನಿವರ್ಸಿಟಿ ಹಾಗೂ ಇನ್ನೂ ಇತರ ಪ್ರತಿಷ್ಠಿತ ಯೂನಿವರ್ಸಿಟಿಗಳು ಪ್ರಾಯೋಜಕತ್ವವನ್ನು ನೀಡಿರುವುದು ಬೇಸರದ ಸಂಗತಿಯಾಗಿದೆ. ಈಗ ಪ್ರತಿಯೊಬ್ಬ ಹಿಂದೂಗಳು ಜಾಗೃತರಾಗಿ ಜಾಗತಿಕ ಮಟ್ಟದಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಲು ಇಂತಹ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿರುವ ಷಡ್ಯಂತ್ರದ ವಿರುದ್ಧ ಧ್ವನಿಯೆತ್ತಬೇಕು ಹಾಗೂ ಕಾನೂನುಬದ್ಧವಾಗಿ ಹೋರಾಡಬೇಕು. ಇಂತಹ ಸಮ್ಮೇಳನಗಳಿಗೆ ಬೆಂಬಲ ನೀಡುವವರು ದೇಶಕ್ಕಾಗಿ ಭಯೋತ್ಪಾದಕರಿಗಿಂತಲೂ ಹಾನಿಕಾರಕವಾಗಿದ್ದಾರೆ. ಅಂತಹವರ ವಿರುದ್ಧ ಕಠೋರ ಕ್ರಮವನ್ನು ಜರುಗಿಸಬೇಕು ಎಂದು ಈ ಸಮಯದಲ್ಲಿ ವಿನಂತಿಸಲಾಯಿತು.
ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನೀಲೇಶ, ನಾರಾಯಣಗೌಡ, ಜಯಂತ ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾದ ಡಾ.ಲೋಹಿತ ಶರವಣ, ಮುರಳಿ ಹಾಗೂ ಧರ್ಮಾಭಿಮಾನಿಗಳಾದ ಜಯಪ್ರಕಾಶ ಇವರು ಉಪಸ್ಥಿತರಿದ್ದರು.
ನಿವೃತ್ತ ಸೈನಿಕನಿಗೆ ಗೌರವಪೂರ್ವಕ ಸ್ವಾಗತ ಕೋರಿದ ಬೈಲಹೊಂಗಲ ಜನತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ