Kannada NewsKarnataka NewsNationalPolitics

*ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದು ಯುವಕ:* *ರಕ್ಷಣೆಗಾಗಿ ಪೊಲೀಸರ ಮೊರೆ*

ಪ್ರಗತಿವಾಹಿನಿ ಸುದ್ದಿ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಪರಸ್ಪರ ಪ್ರೀತಿಸಿದ್ದಾರೆ. ವಿವಾಹಕ್ಕೆ ಯುವತಿಯ ಪೋಷಕರ ವಿರೋಧವಿದ್ದ ಕಾರಣ ಈ ಜೋಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ ಪಸೀಹಾ ಎಂಬ ಯುವತಿ 2 ವರ್ಷಗಳಿಂದ ತನ್ನ ಎದುರು ಮನೆಯ ಹಿಂದೂ ಯುವಕ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು.

ಆದ್ರೆ ಇವರ ಪ್ರೀತಿಗೆ ಜಾತಿ ಧರ್ಮದ ಸಂಕೋಲೆಗಳಿದ್ದರೂ ಅದೆಲ್ಲವನ್ನೂ ಕಳಚಿ ಧರ್ಮವನ್ನು ಬದಿಗಿಟ್ಟು ತಮ್ಮಿಷ್ಟದಂತೆ ಒಂದಾಗಿದ್ದಾರೆ.

ನಾಗಾರ್ಜುನ ಹಾಗೂ ಪಸೀಹಾ ಪೋಷಕರ ವಿರೋಧದ ನಡುವೆಯೇ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ತಮಗೆ ಯುವತಿಯ ಪೋಷರಿಂದ ಆತಂಕವಿದ್ದು ಸೂಕ್ತ ರಕ್ಷಣೆ ನೀಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Home add -Advt

Related Articles

Back to top button