Kannada NewsKarnataka NewsPolitics

*ಹಿಂದೂ ಯುವತಿ ಹತ್ಯೆ ಪ್ರಕರಣ: ಕೊಲೆ ಆರೋಪಿ ಎನ್ ಕೌಂಟರ್ ಮಾಡಿ; ಮುತಾಲಿಕ್*

ಪ್ರಗತಿವಾಹಿನಿ ಸುದ್ದಿ: ನೇಹಾ ಎಂಬ ಯುವತಿಯ ಕೊಲೆ ಹಿಂದೆ ಲವ್ ಜಿಹಾದ್ ಇದ್ದು ಕೂಡಲೇ ಕೊಲೆಗಾರನನ್ನು ಎನ್ ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಪ್ರೀತಿ ನಿರಾಕರಿಸಿದ್ದಕ್ಕೆ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯನ್ನ ಹತ್ಯೆ ಮಾಡಿದ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಶವಾಗಾರ ಕೇಂದ್ರಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಯುವತಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಮೊನ್ನೆ ತಾನೇ ಐದು ಜನ ಯುವಕರು ಬೈಕ್ ಮೇಲೆ ಹೊಗೋವಾಗ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡೋ‌ ಹೇಯ ಕೃತ್ಯ ನಡೆದಿತ್ತು. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸರ್ಕಾರ ಈಗಲಾದರೂ ಗಂಭೀರವಾಗಿ ಪರಿಗಣಿಸಲಿ. ಆರೋಪಿ ಪರ ಯಾರು ವಕಾಲತ್ತು ವಹಿಸಬಾರದು ಎಂದ ಅವರು ಇದೊಂದು ಲಬ್ ಜಿಹಾದ್ ಎಂದರು.

ಅಮಾಯಕ ಹೆಣ್ಣು ಮಗಳ ಕೊಲೆಯಾಗಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ಏನು ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದರು.

Home add -Advt

Related Articles

Back to top button