Kannada News

ಆಧುನಿಕ ಯುಗದಲ್ಲಿ ಶೈಕ್ಷಣಿಕ ವ್ಯವಸ್ಥೆಗಳ ಸಬಲೀಕರಣ ಅತ್ಯಗತ್ಯ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ನಗರ ಪ್ರದೇಶದ ಶೈಕ್ಷಣಿಕ ವ್ಯವಸ್ಥೆಗೆ ಸರಿಸಮಾನ ಸೌಕರ್ಯಗಳನ್ನು ಗ್ರಾಮೀಣ ಭಾಗದ ಶಾಲೆಗಳೂ ಹೊಂದಿದಾಗ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹೋಗಿ  ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ 30 ಡೆಸ್ಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಶೈಕ್ಷಣಿಕ ವ್ಯವಸ್ಥೆಗಳನ್ನು ಸಬಲೀಕರಿಸಬೇಕಾದುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲೆಗೆ ನೀಡಿದ ಸೌಕರ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Home add -Advt

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಶ್ರಫ್ ಪೀರ್ ಖಾದ್ರಿ ಅಜ್ಜನವರು, ಸಿ.ಸಿ. ಪಾಟೀಲ, ಸ್ವಾತಿ ಇಟಗಿ, ನಾಜರಿನ್ ಕರಿದಾವಲ್, ಸುರೇಶ ಇಟಗಿ, ಬಿ ಎನ್ ಪಾಟೀಲ, ಗೌಸ್ ಜಾಲಿಕೊಪ್ಪ, ನಿಂಗಪ್ಪ ತಳವಾರ, ಎಂ.ಡಿ. ಮುಲ್ಲಾ, ಅಜರ್ ಪನ್ನಲಗಡ, ಸಂಜಯ ದೇಸಾಯಿ, ಸಮೀರ ದೇವಲಾಪುರ, ಮೀರಾ ನದಾಫ್, ಸಿದ್ದನಗೌಡ ಪಾಟೀಲ, ಬಿ.ಆರ್. ಪಾಟೀಲ, ಸಲೀಂ ಸತ್ತಿಗೇರಿ, ಖತಾಲ್ ಗೋವೆ, ಮಹಾದೇವಿ ದುರ್ಗಣ್ಣವರ, ರವಿ ಗಾಣಗಿ, ಸಿಕಂದರ್ ಬಾಗವಾನ, ನೀಲಕಂಠ ಮಂಗಲಗಟ್ಟಿ, ಅಬ್ದುಲ್ ಖತೀಬ್, ಎಸ್ ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಭದ್ರತೆಯಲ್ಲಿ ಮತ್ತೆ ಭಾರಿ ಲೋಪ?

Related Articles

Back to top button