Belagavi NewsBelgaum NewsCrimeKannada NewsKarnataka News
*ಹಿರೇಬಾಗೇವಾಡಿ ಪೊಲೀಸ್‌ರಿಂದ ಮಟಕಾ ದಾಳಿ: ಓರ್ವ ಆರೋಪಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಡುತ್ತಿದ್ದ ವ್ಯಕ್ತಿಯನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.
ಮಹ್ಮದಅಲಿ ಗೌಸಸಾಬ ಸನದಿ (40) ಬಂಧಿತ ಆರೊಪಿ. ಬೆಳಗಾವಿಯ ಹಿರೇಬಾಗೇವಾಡಿಯಿಂದ ಬಸ್ಸಾಪೂರ ಕಡೆಗೆ ಸಾಗಿದ ರಸ್ತೆಯ ಎಡಬದಿಗೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದಾಗ ಹಿರೇಬಾಗೇವಾಡಿ ಠಾಣೆಯ ಪೊಲೀಸರು ದಾಳಿ ಮಾಡಿ, ಆರೋಪಿಯಿಂದ ಒಟ್ಟು ರೂ.1260 ರೂ. ನಗದು ಹಣ ಹಾಗೂ ಓಸಿ ಚೀಟಿಗಳನ್ನು ಜಪ್ತಪಡಿಸಿದ್ದಾರೆ
ಆರೋಪಿ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ .(18/2026 0.78(III) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ) ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.
ದಾಳಿ ಕೈಗೊಂಡ ಪಿಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.


