Kannada NewsKarnataka NewsLatest

ಕೇಂದ್ರ ಸರ್ಕಾರದಿಂದ ಮತ್ತೊಂದು ಐತಿಹಾಸಿಕ ನಡೆ – ಅಣ್ಣಾಸಾಹೇಬ ಜೊಲ್ಲೆ

 ಪ್ರತ್ಯೇಕ ಸಹಕಾರ ಸಚಿವಾಲಯ ರಚನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಬಹುದಿನಗಳಿಂದ ರಾಷ್ಟ್ರಮಟ್ಟದಲ್ಲಿ ಸಹಕಾರ ವಲಯಕ್ಕೆ ಪ್ರತ್ಯೇಕ ಸಚಿವಾಲಯದ ಮಾಡಲು ಬೇಡಿಕೆ ಇಟ್ಟಿದ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ ಹಾಗೂ ಅವರ ಸಹಕಾರ ತಂಡದವರ ಬೇಡಿಕೆಯನ್ನು ಮೋದಿ ಸರ್ಕಾರ ಈಡಿರಿಸಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರತ್ಯೇಕ ಸಚಿವಾಲಯ ಜಾರಿಗೊಳಿಸಲು ಸಹಕಾರ ಮಾಡಿದ ಪ್ರಧಾನ ಮಂತ್ರಿ, ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ರಾಷ್ಟ್ರೀಯ ಮುಖಂಡರಿಗೆ ಅವರು ಧನ್ಯವಾದ ಸಲ್ಲಿಸಿದರು.
ಈ ಸಚಿವಾಲಯವು ಸಹಕಾರಿ ಸಂಸ್ಥೆಗಳಿಗೆ ’ವ್ಯವಹಾರಗಳನ್ನು ಸುಲಭಗೊಳಿಸುವ’ ಪ್ರಕ್ರಿಯೆ ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರಿ ಸಂಘಗಳ (ಎಂಎಸ್‌ಸಿಎಸ್) ಅಭಿವೃದ್ಧಿಯನ್ನು ಶಕ್ತಗೊಳಿಸಲು ಸಚಿವಾಲಯವು ಕೆಲಸ ಮಾಡಲಿದೆ. ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢಿಕರಿಸುವ ಮತ್ತು ತಿದ್ದುಪಡಿ ಮಾಡುವ ಕಾಯ್ದೆಗಳು, ಒಂದು ರಾಜ್ಯಕ್ಕೆ ಸಿಮಿತವಾಗಿರದ ವಸ್ತುಗಳು ಮತ್ತು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸದಸ್ಯರ ಹಿತಾಸಕ್ತಿಗಳನ್ನು ಪೂರೈಸುವುದು, ಸಂಸ್ಥೆಗಳ ಆಧಾರದ ಮೇಲೆ ಸಹಕಾರ ಸಂಘಗಳ ಸ್ವಯಂಪ್ರೇರಿತ ರಚನೆ ಮತ್ತು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ಜೊಲ್ಲೆ ತಿಳಿಸಿದರು.
ಸ್ವ-ಸಹಾಯ ಮತ್ತು ಪರಸ್ಪರ ಸಹಾಯದ ಮೇಲೆ ಮತ್ತು ಅವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಯನ್ನು ಉತ್ತೇಜಿಸಲು ಮತ್ತು ಕ್ರೀಯಾತ್ಮಕ ಸ್ವಾಯತ್ತತೆಯನ್ನು ಒದಗಿಸಲು ಅನುವುಮಾಡಿಕೊಡುವುದು, ವಿವಿಧ ಸಹಕಾರಿ ಸಂಘಗಳ ಮತ್ತು ಒಕ್ಕೂಟಗಳಿಗೆ ಅನೂಕೂಲವಾಗಲಿದೆ.
ಈ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಲಿದೆ ಮತ್ತು ಇದು ಸಹಕಾರ ವಲಯದಲ್ಲಿ ತಳಮಟ್ಟದವರೆಗೆ ತಲುಪಲು ಸಹಾಯವಾಲಿದೆ ಮತ್ತು ಈ ಪ್ರತ್ಯೇಕ ಸಚಿವಾಲಯದ ರಚನೆಯು ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರದ ಬದ್ಥಯನ್ನು ಸೂಚಿಸುತ್ತದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button