Kannada NewsKarnataka News
ಕಿತ್ತೂರು ಚನ್ನಮ್ಮ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ – ಸಂಸದ ಅಣ್ಣಾ ಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜೊಲ್ಲೆ ಗ್ರುಪ್ ಯಕ್ಸಂಬಾ ಮತ್ತು ಧಾರವಾಡದ ರಂಗಾಯಣ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಇತಿಹಾಸ ಸಾರುವ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕೆ ಹಲವಾರು ರಾಜ ಮಹಾರಾಜರು ಜೀವ ಕೊಟ್ಟಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯಿಂದ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳು ಪ್ರಥಮರಾಗಿ ಹೋರಾಟ ಮಾಡಿದ್ದಾರೆ ಎಂದರು.
ಬಹಳಷ್ಟು ಜನರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ನಾವುಗಳು ಟಿವಿ.ಮೊಬೈಲ್ ನಲ್ಲಿ ಸಿಲುಕಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮರೆತ್ತಿದ್ದೇವೆ. ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ನಿರ್ದೇಶನ ಮಾಡಿರುವ ಕಿತ್ತೂರ ಚೆನ್ನಮ್ಮ ನಾಟಕವನ್ನು ಯುವಕರು ನೋಡಿ ಚೆನ್ನಮ್ಮಳ ಶೌರ್ಯ. ದೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಧಾರವಾಡದ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ ರಾಣಿ ಚೆನ್ನಮ್ಮ ಗತ ವೈಭವ ನೋಡಲು ಅವಕಾಶ ಮಾಡಿಕೊಟ್ಟ ಜೊಲ್ಲೆ ಗ್ರುಪ್ ಕಾರ್ಯ ಶ್ಲಾಘನೀಯ. . ರಾಜ್ಯಾಧ್ಯಂತ 25 ಕಡೆ ಬುಕಿಂಗ್ ಆಗಿದೆ. ಜೊಲ್ಲೆ ದಂಪತಿ 5 ನಾಟಕ ಬುಕಿಂಗ್ ಮಾಡಿ ಇತಿಹಾಸ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮಹಾಮಂಡಳದ ನಿರ್ದೇಶಕ ಜಗದೀಶ ಕವಟಗಿಮಠ ಮಾತನಾಡಿದರು.
ವೇದಿಕೆ ಮೇಲೆ ಚರಮೂರ್ತಿಮಠದ ಶ್ರೀ ಸಂಪಾದನ ಸ್ವಾಮೀಜಿ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಕಮತೇನಟ್ಟಿ. ಶಿವಬಸವ ಸ್ವಾಮೀಜಿ ಖಡಕಲಾಟ. ವಿಶ್ವ ಹಿಂದುಪರಿಷತ್ ಮುಖಂಡ ವಿಠ್ಠಲಜಿ. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ. ಎಸ್.ಎಸ್.ಕವಲಾಪೂರೆ. ಸಂಜಯ ಅಡಕೆ. ಜ್ಯೋತಿಪ್ರಸಾದ ಜೊಲ್ಲೆ.ರಾವಸಾಹೇಬ ಕಮತೆ. ಜಯಾನಂದ ಜಾಧವ. ನಾಗರಾಜ ಮೇದಾರ. ಬಾಬು ಮಿರ್ಜೆ. ಸಿದ್ದಪ್ಪ ಡಂಗೇರ. ವಿಶ್ವನಾಥ ಕಾಮಗೌಡ. ಪ್ರಶಾಂತ ಕಾಳಿಂಗೆ.ಸೋಮು ಗವನಾಳೆ ಮುಂತಾದವರು ಇದ್ದರು.
ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
https://pragati.taskdun.com/veerarani-kittoor-chennamma-mega-drama-from-jan-29/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ