*HMPV ಕೇಸ್: ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ*
ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ HMPV ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲೆಡೆ ತೀವ್ರ ನಿಗಾವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ.
ಬೆಂಗಳೂರಿನಲ್ಲಿ ಎರಡು ಕೇಸ್ ಪತ್ತೆಯಾಗಿದ್ದೆ ತಡ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. HMP ವೈರಸ್ ಲಕ್ಷಣ ಇರುವ ಪ್ರತಿಯೊಬ್ಬರಿಗೂ ಬ್ಲಡ್ ಟೆಸ್ಟ್ ಕಡ್ಡಾಯ ಗೊಳಿಸಿದೆ. ಅಲ್ಲದೆ ಅವರ ಟ್ರಾವೆಲ್ ಹಿಸ್ಟರಿ ಹಾಗೂ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸಲಿದ್ದಾರೆ.
ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ತೀವ್ರ ಜ್ವರ ಕೆಮ್ಮು ಹಾಗೂ SARI ಗುಣಲಕ್ಷಣಗಳು ಕಂಡು ಬಂದ್ರೆ ಟೆಸ್ಟ್ ಮಾಡಿಸುವುದು ಹಾಗೂ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ತಿಳಿಸಿದೆ. ಮಕ್ಕಳು ಹಾಗೂ ವೈದ್ಯರ ಮೇಲೆ ಗಮನವಿರಬೇಕು. ಆಸ್ಪತ್ರೆಗಳಲ್ಲಿನ ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ನಿಮೋನಿಯಾ ಕೇಸ್ ಗಳ ಬಗ್ಗೆ ಗಮನ ವಹಿಸಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ನಿಮೋನಿಯಾ ಪ್ರಕರಣ ಕಂಡು ಬಂದ್ರೆ ಟೆಸ್ಟಿಂಗ್ ಹಾಗೂ ರಿಪೋರ್ಟ್ ಮಾಡುವಂತೆ ಎಚ್ಚರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ