Karnataka NewsLatest

*7ಕ್ಕೇರಿದ HMPV ವೈರಸ್ ಸೋಂಕು: ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ಕೊರೊನಾ ಸೋಂಕಿನ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ವೈರಸ್ ಶುವಾಗಿದ್ದು, ಅದರಲ್ಲಿಯೂ ಮಕ್ಕಳನ್ನು ತೀವ್ರವಾಗಿ ಕಾಡುತ್ತಿದೆ. ಭಾರತದಲ್ಲಿ 7 ಮಕ್ಕಳಲ್ಲಿ HMPV ವೈರಸ್ ದೃಢಪಟ್ಟಿದೆ.

ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನ ಇಬ್ಬರು ಮಕ್ಕಳು HMPV ವೈರಸ್ ನಿಂದ ಬಳಲುತ್ತಿದ್ದಾರೆ,. ಬೆಂಗಳೂರಿನಲ್ಲಿ ಮೂರು ಮಕ್ಕಳು HMPV ವೈರಸ್ ಸೋಂಕಿನಿದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಓರ್ವ ಮಗು ಗುಣಮುಖರಾಗಿ ಡಿಸಾರ್ಜ್ ಆಗಿದೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.

ನಾಗಪುರದಲ್ಲಿ ಇಬ್ಬರು ಮಕ್ಕಳು HMPV ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ತಮಿಉನಾಡಿನಲ್ಲಿಯೂ ಇಬ್ಬರು ಮಕ್ಕಳಲ್ಲಿ HMPV ವೈರಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗುಜರಾತ್ ನ ಅಹಮದಾ ಬಾದ್ ನಲ್ಲಿ ಓರ್ವ ಮಗುವಿನಲ್ಲಿ HMPV ವೈರಸ್ ದೃಢಪಟ್ಟಿದೆ.

ಒಟ್ಟಾರೆ ಭಾರದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ HMPV ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Home add -Advt

Related Articles

Back to top button