Latest

ಡ್ಯಾನ್ಸ್ ಮಾಡುತ್ತ ತನಗೆ ತಾನೇ ಚಾಕು ಇರಿದುಕೊಂಡ ವ್ಯಕ್ತಿ ಸಾವು

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಹೋಳಿ ಸಂಭ್ರಮದ ವೇಳೆ ದುರಂತವೊಂದು ಸಂಭವಿಸಿದೆ. ಮಧ್ಯಪ್ರದೇಶದ ಬಂಗಾಂಗದಲ್ಲಿ ಜನರು ಪರಸ್ಪರ ಬಣ್ಣ ಎರಜಿ, ಭರ್ಜರಿ ಮ್ಯೂಜಿಕ್ ಹಾಕಿ ನೃತ್ಯ ಮಾಡುತ್ತಿದ್ದರು. ಇದೇ ವೇಳೆ ವ್ಯಕ್ತಿಯೋರ್ವ ಚಾಕುವಿನಿಂದ ತನಗೆ ತಾನೇ ಚುಚ್ಚಿಕೊಂಡ ಘಟನೆ ನಡೆದಿದೆ.

ಚಾಕು ಹಿಡಿದು ನೃತ್ಯ ಮಾಡುತ್ತಿದ್ದ ವ್ಯಕ್ತಿ, ಡಾನ್ಸ್ ಮಾಡುತ್ತ ಮಾಡುತ್ತ ತನಗೆ ತಾನೇ ಇರಿದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ತೀವ್ರ ರಕ್ತಸ್ರಾವದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಗೋಪಾಲ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಸೇರಿ ಹೋಳಿ ಸಂಭ್ರಮಾಚರಟೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಗೋಪಾಲ್ ಏಕಾಏಕಿ ಚಾಕು ಇರಿದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಕುರಿತು ಬಂಗಾಂಗ ಪೊಲೀಸ್ ಠಾಣೆ ಅಧಿಕಾರಿ ಯೋಗೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

 

Related Articles

Back to top button