Belagavi NewsBelgaum NewsKannada NewsKarnataka News

*ಗೃಹರಕ್ಷಕದಳದ ಘಟಕ: ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧ ಗೃಹರಕ್ಷಕದಳದ ಘಟಕ ಹಾಗೂ ಉಪಘಟಕಗಳಲ್ಲಿ ಖಾಲಿ ಇರುವ 154 ಸದಸ್ಯ ಸ್ಥಾನಗಳಿಗೆ ಆಸಕ್ತಿವುಳ್ಳ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಬೆಳಗಾವಿ ಜಿಲ್ಲೆಯ ನಿವಾಸಿಯಾಗಿದ್ದು, 20 ವರ್ಷ ರಿಂದ 45 ವರ್ಷ ವಯೋಮಿತಿರಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. 10ನೇ ತರಗತಿ ಕಡ್ಡಾಯವಾಗಿ ಉತ್ತೀರ್ಣವಾದ, ವಿಶೇಷ ವೃತ್ತಿ ಕೌಶಲ್ಯ ಹೊಂದಿದವರಿಗೆ ಪ್ರಮುಖ ಆದ್ಯತೆ ನೀಡಲಾಗುವುದು.

Home add -Advt

ಸದರಿ ಸದಸ್ಯತ್ವಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಮಾಸಿಕ ವೇತನ ಇರುವುದಿಲ್ಲ. ಇದು ಸರ್ಕಾರಿ ಹುದ್ದೆಯಾಗಿರುವುದಿಲ್ಲ. ಆದರೆ ಕಾನೂನು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸುವ ಸಂದರ್ಭಗಳಲ್ಲಿ ಒಂದು ದಿನಕ್ಕೆ 800 ರಂತೆ ಇತರೆ ಇಲಾಖೆಯಲ್ಲಿನ ಪಹರೆ ಕರ್ತವ್ಯಕ್ಕೆ ಒಂದು ದಿನಕ್ಕೆ 500 ರಂತೆ ಪ್ರಸ್ತುಕ ಕರ್ತವ್ಯ ಭತ್ಯೆ ಮಾತ್ರ ಇರುತ್ತದೆ.

ಆಸಕ್ತ ಅಭ್ಯರ್ಥಿಗಳು ಡಿ.12 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಸಮಾದೇಷ್ಟರವರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಜಿಲ್ಲಾ ಗೃಹರಕ್ಷಕದಳ ಚನ್ನಮ್ಮ ಹೌಸಿಂಗ್ ಸೊಸೈಟಿಯ ಸಮಾದೇಷ್ಟರವರ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಚನ್ನಮ್ಮ ಹೌಸಿಂಗ್ ಸೊಸೈಟಿಯ ಸಮಾದೇಷ್ಟರವರ ಕಚೇರಿಯ ದೂರವಾಣಿ:0831-2420451 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button