Karnataka News

*SSLC ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗಾವಕಾಶ*

ಪ್ರಗತಿವಾಹಿನಿ ಸುದ್ದಿ: ಗೃಹ ರಕ್ಷಕ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳ ದಲ್ಲಿ 140 ಜನರಿಗೆ ಹೊಸದಾಗಿ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ಆಸಕ್ತಿ ಇದ್ದವರು ಹತ್ತನೇ ತರಗತಿ ಪಾಸ್ ಆಗಿರಬೇಕು, 19 ವರ್ಷಕ್ಕಿಂತ ಮೇಲ್ಪಟ್ಟ , 50 ವರ್ಷ ದೊಳಗಿನ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶ ಇದೆ ಎಂದು ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ.ಸಂಜು ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.


ಕಂಪ್ಯೂಟರ್ ಜ್ಞಾನ ಇದ್ದವರಿಗೆ, ಹೆವಿ ಡ್ರೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್, ಪ್ಲಂಬರ್ ಹಾಗೂ ಎನ್. ಸಿ.ಸಿ. ಮತ್ತು ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ನೇಮಕಾತಿ ಮಾಡಿಕೊಳ್ಳಾಗುತ್ತದೆ. ಅರ್ಜಿಯನ್ನು ಗೃಹ ರಕ್ಷಕ ದಳದ ಜಿಲ್ಲಾ ಕಛೇರಿ, ಸರ್ವೋದಯ ನಗರ, ದಿವೆಕರ್ ಕಾಮರ್ಸ್ ಕಾಲೇಜ್ ಎದುರು, ಕೊಡಿಭಾಗ, ಕಾರವಾರ ಇಲ್ಲಿ ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನೀಡಲು ಕೊನೆಯ ದಿನಾಂಕ ಮಾರ್ಚ್ 3 ರವರಿಗೆ ಇದೆ. ತಾಲ್ಲೂಕು ಸರಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ ಜೊತೆಗೆ ಆಧಾರ್ ಕಾರ್ಡ್ ಮತ್ತು ಎಸ್.ಎಸ್.ಎಲ್. ಸಿ ಮಾರ್ಕ್ಸ್ ಕಾರ್ಡನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿಗೆ 08382 -200137 / 226361 ಅಥವಾ 9480898775 ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button