
ಎದೆಯ ಹಾಲು ಕಣ್ಣು ನೋವಿಗೆ ಸಂಜೀವಿನಿ, ಟ್ರೈ ಮಾಡಿ
ಪ್ರಗತಿವಾಹಿನಿ ಸುದ್ದಿ – ಹೆಲ್ತ್ ಟಿಪ್ಸ್ : ಕೆಲವೊಮ್ಮೆ ಕಣ್ಣಿನಿಂದ ಹುಟ್ಟುವ ನೋವು ತಲೆನೋವು , ಸೈನಸ್ ನೋವು, ಹಲ್ಲುನೋವು ಅಥವಾ ಮೈಗ್ರೇನ್ ನಂತಹ ಇತರ ರೋಗಲಕ್ಷಣಗಳೊಂದಿಗೆ ಗೊಂದಲಕ್ಕೊಳಗಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ಕಣ್ಣು ನೋವನ್ನು ವಿಭಿನ್ನವಾಗಿ ವ್ಯಾಖ್ಯಾನಿಸಬಹುದು. ನಿಕಟ ಕೆಲಸಕ್ಕಾಗಿ ಕಣ್ಣುಗಳನ್ನು ಬಳಸಿದ ನಂತರ ಮುಖದ ಸ್ನಾಯುಗಳ ಉದ್ವಿಗ್ನತೆಯಿಂದಾಗಿ ಹಣೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಣ್ಣಿನ ಒತ್ತಡ ಎಂದು ಕರೆಯಲಾಗುತ್ತದೆ.
ದೀರ್ಘ ಸಮಯ ಕಂಪ್ಯೂಟರ್ ಬಳಕೆ, ನಿರಂತರ ಮೊಬೈಲ್ ಬಳಕೆ, ದೂಳು ಅಥವಾ ಇನ್ನಿತರ ಕಾರಣಗಳು ಕಣ್ಣನ್ನು ಬಾಧಿಸುತ್ತವೆ.
ಕಣ್ಣಿನ ನೋವಿಗೆ ಸರಳ ಪರಿಹಾರಗಳು ಇಲ್ಲಿವೆ ನೋಡಿ . .
- ಕೇಸರಿ ದಳಗಳನ್ನು ಎದೆಯ ಹಾಲಿನಲ್ಲಿ ಬೆರಸಿ, ಅದರ ಎರಡು ಹನಿಗಳನ್ನು ಕಣ್ಣಿಗೆ ಬಿಟ್ಟರೆ, ಕೆಲವೇ ಕ್ಷಣಗಲ್ಲಿ ಕಣ್ಣಿನ ನೋವು ವಾಸಿಯಾಗುತ್ತದೆ.
- ಬೆಟ್ಟದ ನೆಲ್ಲಿಕಾಯಿಯನ್ನು ಸೂಜಿಯಿಂದ ಚುಚ್ಚಿ ಹೊರ ತೆಗೆಯಿರಿ, ಸೂಜಿ ಚುಚ್ಚಿದ ಸ್ಥಳದಿಂದ ಬರುವ ರಸವನ್ನು ಕನ್ನಿಕೆ ಹಾಕಿಕೊಳ್ಳಿ, ಈ ರೀತಿ ಮಾಡುವುದರಿಂದ ತೀವ್ರ ಸುಡುವ ಕಣ್ಣು ನೋವು ಶಮನವಾಗುತ್ತದೆ.
- ಇದೆಲ್ಲಕ್ಕೂ ಸುಲಭ ಪರಿಹಾರ ನಿರೀಕ್ಷಿಸುತ್ತಿದ್ದರೆ, ಪ್ರತಿ ನಿತ್ಯ ಅನಾನಸ್ ಹಣ್ಣನ್ನು ಸೇವಿಸಲು ಪ್ರಾರಂಭಿಸಿ, ಇದರಿಂದ ಈಗ ಇರುವ ಕಣ್ಣು ನೋವು, ಹಾಗು ಮುಂದೆ ಬರುವ ಕಣ್ಣು ನೋವು ವಾಸಿಯಾಗುತ್ತದೆ.
ಕಣ್ಣಿನ ತೀವ್ರ ಸ್ವರೂಪದಿಂದಾಗಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಕಣ್ಣಿನ ಸಮಸ್ಯೆಗಳನ್ನು ತಪ್ಪದೆ ನೇತ್ರಶಾಸ್ತ್ರಜ್ಞರ ಬಳಿ ಪರಿಹರಿಸಿಕೊಳ್ಳಿ . . .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ