ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎರಡು ದಿನಗಳ ೨೧ ನೇ ಅಖಿಲ ಭಾರತೀಯ ಹೋಮಿಯೋಪೆಥಿಕ್ ವಿಜ್ಞಾನಿಕ ಕಾರ್ಯಾಗಾರ ನವ್ಹೆಂಬರ ೧೬ ಮತ್ತು ೧೭ ರಂದು ಬೆಳಗಾವಿಯಲ್ಲಿ ನಡೆಯಲಿದೆ.
ಕೆ.ಎಲ್.ಇ. ಶತಮಾನೋತ್ಸವ ಕನ್ವೇಷನ್ ಸೆಂಟರ್ ಸಭಾಗೃಹದಲ್ಲಿ ಹೋಮೀಯೋಪೆಥಿಕ ಮೆಡಿಕಲ್ ಅಸೋಸಿಯೇಶನ್ ವತಿಯಿಂದ, ಕರ್ನಾಟಕ ಖಾಸಗಿ ಹೋಮೀಯೋಪೆಥಿಕ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಸಂಘ, ಆಯುಷ್ಯ ಇಲಾಖೆ ಕರ್ನಾಟಕ ಸರಕಾರ ಮತ್ತು ರಾಜೀವ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವ ವಿದ್ಯಾಲಯ ಇವುಗಳ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೋಮಿಯೋಪೆಥಿ ಕೇಂದ್ರ ಮಂಡಳಿಯ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಸದಸ್ಯ ನಾಡೋಜ ಡಾ. ಬಿ.ಟಿ.ರುದ್ರೇಶ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಮೀಯೋಪಥಿಕ್ ಪದ್ದತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ನಾಗರಿಕರಿಗೆ ಅನಕೂಲಕರ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರದಲ್ಲಿ ನಾಡಿನ ವಿವಿಧ ಖ್ಯಾತ ವೈದ್ಯರು ಭಾಗವಹಿಸಲಿದ್ದಾರೆ. ಈ ಸೆಮಿನಾರಲ್ಲಿ ವಿವಿಧ ಸಂಶೋಧನೆಗಳು, ಸುಧಾರಿತ ವೈದ್ಯ ಪದ್ದತಿ, ಔಷಧೋಪಚಾರ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ನ. ೧೬ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎನ್.ಸತ್ಯಮೂರ್ತಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ನ್ಯಾನೋ ಮತ್ತು ಸಾಪ್ಟ್ ಮ್ಯಾಟರ‍್ಸ್ ಸಾಯಿನ್ಸ್ ಕೇಂದ್ರ ಬೆಂಗಳೂರು ವಿಜ್ಞಾನಿ ಡಾ. ಚನ್ನಬಸವೇಶ್ವರ ವ್ಹಿ.ಎಲಮಗ್ಗಡ ಇವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ರಜಿಸ್ಟ್ರಾರ್ ಶಿವಾನಂದ ಕಾಪಸಿ , ಕೇಂದ್ರ ಹೋಮೀಯೋಪಥಿ ಸಂಶೋಧನೆ ಮಂಡಳಿಯ ನಿರ್ದೇಶಕ ಡಾ.ಅನಿಲ ಖುರಾನಾ, ಮಂಡಳಿಯ ಕಾರ್ಯದರ್ಶಿ ಡಾ. ಕುಮಾರ ವಿವೇಕಾನಂದ, ಆಯುಷ್ಯ ಕಚೇರಿಯ ಜಂಟಿ ನಿರ್ದೇಶಕ , ಕರ್ನಾಟಕ ಖಾಸಗಿ ಹೋಮೀಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಡಳಿತ ಮಂಡಳಿಯ ಅಸೋಸಿಯೇಶನ್ ಸಂಘಟನೆಯ ಅಧ್ಯಕ್ಷ ಎಸ್.ಆರ್. ನಿರಲಕಟ್ಟಿ, ಹೋಮೀಯೋಪೆಥಿಕ ಮೆಡಿಕಲ್ ಆಸೋಸಿಯೇಶನ್ ಉಪಾಧ್ಯಕ್ಷ ಡಾ.ಎಸ್.ಐ.ಹುಸೇನ, ಕಾರ್ಯದರ್ಶಿ ಡಾ.ಪಿಯುಷ್ ಜೋಶಿ, ಡಾ. ಅರುಣ ಭಸ್ಮೆ ಇವರು ಆಗಮಿಸಲಿದ್ದಾರೆ.
ಹೋಮೀಯೋಪಥಿಕ ಮೆಡಿಕಲ್ ಅಸೋಶಿಯೇಶನ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ. ರಾಮಜೀ ಸಿಂಗ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ನ. ೧೭ ಶನಿವಾರ ಸಾಯಂಕಾಲ ೫ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಎಲ್.ಇ.ಡೀಮ್ಡ್ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ವಿವೇಕ ಸಾವಜಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಖಾಸಗಿ ಹೋಮೀಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಡಳಿತ ಮಂಡಳಿಯ ಅಸೋಸಿಯೇಶನ್ ಸಂಘಟನೆಯ ಉಪಾಧ್ಯಕ್ಷ ಜಗದೀಶ ಸವದತ್ತಿ, ಡಾ.ಬಿ.ಟಿ.ಬಾಮನೆ, ಡಾ. ಸುರೇಶ ದೊಡವಾಡ ಇವರು ಆಗಮಿಸಲಿದ್ದು, ಡಾ. ಎಂ.ವಾಯ್. ಪೆರಿ ರಾಜಗೋಪಾಲ ಇವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಹೋಮೀಯೋಪಥಿಕ್ ಹಿರಿಯ ವೈದ್ಯರಾದ ಬೆಳಗಾವಿಯ ಡಾ.ಎಸ್.ಎಸ್.ಆದಿ, ಡಾ.ಎಂ.ಎಸ್.ಮುರುಗೋಡ, ಬೆಂಗಳೂರಿನ ಡಾ.ರಾಮದಾಸ, ಹಾಗೂ ಕಲಬುರ್ಗಿಯ ಡಾ.ಎಸ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಶ್ರೀಕಾಂತ ಕೊಂಕಣಿ, ಡಾ. ಎಂ.ವಾಯ್ ಪೆರಿ ರಾಜಗೋಪಾಲ, ಡಾ. ಶಿವಕುಮಾರ ಆರ್. ಡಾ. ಆನಂದ ಹೊಸುರ, ಡಾ.ಡಿ.ಟಿ.ಬಾಮನೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ