
ಮಳೆರಾಯ ನಿಲ್ಲುವಂತೆ ಪ್ರಾರ್ಥಿಸಿ ಬೆಳಗಾವಿಯಲ್ಲಿ ಹೋಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸತತ ೨೦ ದಿನಗಳಿಂದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ನೂರಾರು ಹಳ್ಳಿಗಳು ಜಲಾವೃತವಾಗಿವೆ. ಮೂಕ ಪ್ರಾಣಿಗಳ ವೇದನೆ ಕೇಳಲಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಬೆಳಗಾವಿಯ ಪುರೋಹಿತರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಸಾನಿಧ್ಯದಲ್ಲಿ ವಿಶೇಷವಾಗಿರುವ ಹೋಮ ಮಾಡಿ ಮಳೆರಾಯ ನಿಲ್ಲುವಂತೆ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಬೈಲಹೊಂಗಲದ ವೇದಮೂರ್ತಿ ಮಹಾಂತೇಶ ಶಾಸ್ತ್ರೀಗಳು, ಬೆಳಗಾವಿಯ ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಸಂಗಮೇಶ್ವರ ದೇವಸ್ಥಾನದ ಅರ್ಚಕ ಬಸಯ್ಯ ಶಾಸ್ತ್ರೀಗಳು, ವೀರಭದ್ರೇಶ್ವರ ದೇವಸ್ಥಾನದ ಸಂಗಯ್ಯ ಶಾಸ್ತ್ರೀಗಳು, ಕೆಎಲ್‌ಇ ಶಂಕರಯ್ಯ ಶಾಸ್ತ್ರಿಗಳನ್ನು ಒಳಗೊಂಡಂತೆ ಹಲವಾರು ಪುರೋಹಿತರು ಸಂಗಮೇಶ್ವರ ದೇವಸ್ಥಾನದಲ್ಲಿ ಹೋಮವನ್ನು ಏರ್ಪಡಿಸಿದ್ದರು.
ಹೋಮದ ಪೂರ್ಣಾವತಿಯನ್ನು ಮಾಡಿ ಮಾತನಾಡಿದ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪುರೋಹಿತರು ಎಂದರೆ ಭಕ್ತ, ದೇವರ ನಡುವೆ ಇರುವ ಕೊಂಡಿ ಇದ್ದ ಹಾಗೆ. ಪುರದ ಹಿತವನ್ನು ಬಯಸುವ ಪುರೋಹಿತ. ಆ ಕಾರ್ಯವನ್ನು ನಿಜಕ್ಕೂ ಕೂಡ ನಮ್ಮ ಬೆಳಗಾವಿಯ ನಮ್ಮ ಪುರೋಹಿತರು ಮಾಡಿದ್ದಾರೆ ಎಂದರೆ ತಪ್ಪಾಗಲಾರದರು. ಇಂದು ನಡೆದ ಹೋಮದಿಂದ ಮಳೆರಾಯ ಶಾಂತನಾಗಿ ಜನಜೀವನ ಅಸ್ತವ್ಯಸ್ಥರಾದ ಸಂದರ್ಭದಲ್ಲಿ ಶಾಂತನಾಗುವಂತೆ ಜನರಿಗೆ ಅನಕೂಲ ಮಾಡಿಕೊಡಬೇಕೆಂದರು.
ಹೋಮದ ನೇತೃತ್ವ ವಹಿಸಿಕೊಂಡಿದ್ದ ಬೈಲಹೊಂಗಲದ ವೇದಮೂರ್ತಿ ಮಹಾಂತೇಶ ಶಾಸ್ತ್ರೀ ಮಾತನಾಡಿ, ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಾಲೂಕು ಹಾಗೂ ಜಿಲ್ಲಾದ್ಯಂತ ಸಂಚರಿಸಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅನ್ನವನ್ನು ಉಣಬಡಿಸುತ್ತಿದ್ದಾರೆ. ಹಾಗೆ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಎಲ್ಲರೂ ಸಹಕರಿಸುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಪುರೋಹಿತ ವರ್ಗದವರಾದ ನಾವೆಲ್ಲ ಕೂಡ ಗುರುಗಳ ಸಂಕಲ್ಪ ಸಿದ್ದಿಯಾಗಲಿ. ಮಳೆರಾಯ ನಿಂತು ಶಾಂತನಾಗಲಿ ಎಂದು ಹೋಮವನ್ನು ಮಾಡಿದ್ದೇವೆ. ಮಳೆರಾಯ ಅನುಗ್ರಹಿಸಬೇಕು. ಉತ್ತರ ಕರ್ನಾಟಕ ಹಾಗೂ ಕರ್ನಾಟಕದ ಜನ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರ ಹೆಚ್ಚು ಸಹಕಾರ ನೀಡಬೇಕು. ಇದರ ಜತೆಗೆ ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ