Kannada NewsKarnataka NewsLatest
ಪ್ರಾಮಾಣಿಕ, ಸೌಮ್ಯ ಅಭ್ಯರ್ಥಿ ಮಂಗಲಾ ಅಂಗಡಿ ಬೆಂಬಲಿಸಿ – ಡಾ.ಸೋನಾಲಿ ಸರ್ನೋಬತ್

ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಹಿಳೆಯೊಬ್ಬರಿಗೆ ಅವಕಾಶ ಕಲ್ಪಿಸೋಣ


ಸುರೇಶ ಅಂಗಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಮಂಗಲಾ ಅಂಗಡಿ ಅವರನ್ನು ಅದಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ತನ್ಮೂಲಕ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಹಿಳೆಯೊಬ್ಬರಿಗೆ ಸಂಸದರಾಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸೋನಾಲಿ ಕರೆ ನೀಡಿದರು.
ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಸುರೇಶ ಅಂಗಡಿ ಅವರ ಪುತ್ರಿ ಸ್ಫೂರ್ತಿ ಪಾಟೀಲ ಸಹ ಭಾಗವಹಿಸಿ ನಾಗರಿಕರೊಂದಿಗೆ ಚರ್ಚೆ ನಡೆಸಿದರು.
ಡಾ.ಸಮೀರ್ ಸರ್ನೋಬತ್, ಭಾಸ್ಕರ್ ಪಾಟೀಲ, ಸುನೀಲ ದೇಶಪಾಂಡೆ, ವಿಲಾಸ ಪೈ, ದಯಾನಂದ ಪೈ, ಸುನಿತಾ ಪಟ್ಟಣಶೆಟ್ಟಿ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ