Latest

ಹನಿಟ್ರ್ಯಾಪ್ ಕೇಸ್; ಜ್ಯೋತಿಷಿಯಿಂದಲೇ 49 ಲಕ್ಷ ವಸೂಲಿ ಮಾಡಿದ್ದ ದಂಪತಿ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಜ್ಯೋತಿಷಿಯನ್ನೇ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ 49 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದ ಖತರ್ನಾಕ್ ದಂಪತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

30 ವರ್ಷದ ಕೊಡಗು ಮೂಲದ ಭವ್ಯ ಹಾಗೂ ಹಾಸನ ಮೂಲದ 35 ವರ್ಷದ ಕುಮಾರ್ ಬಂಧಿತ ಆರೋಪಿಗಳು. ಪತಿ-ಪತ್ನಿಯರಾದ ತಮ್ಮಿಬ್ಬರಿಗೂ ಹೊಂದಾಣಿಕೆಯಿಲ್ಲ ಪದವಿನಂಗಡಿಯ ತಮ್ಮ ಮನೆಗೆ ಬಂದು ಪೂಜೆ ಮಾಡಬೇಕು ಎಂದು ಕರೆದಿದ್ದಾರೆ. ಮನೆಗೆ ಕರೆಸಿಕೊಂಡ ಆರೋಪಿಗಳು ಜ್ಯೋತಿಷಿಯ ಫೋಟೋ, ವಿಡಿಯೋ ತೆಗೆದುಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.

ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ 15 ಲಕ್ಷ ರೂ ನಗದು ಹಾಗೂ 34 ಲಕ್ಷ ರೂಪಾಯಿ ಬೇರೆ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಸಂಬಂಧಿಕರಿಂದ ಸಾಲ ಪಡೆದು ಹಣ ಕೊಟ್ಟು ಬೇಸತ್ತಿದ್ದ ಜ್ಯೋತಿಷಿ ಅಂತಿಮವಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಗ್ರಾಮೀಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

Home add -Advt

Related Articles

Back to top button