Cancer Hospital 2
Bottom Add. 3

ಸಾವಗಾಂವ್ ಗ್ರಾಮದಲ್ಲಿ ಮನೆ ಮಗಳಿಗೆ ಸನ್ಮಾನ; ಅಭಿವೃದ್ಧಿ ಯೋಜನೆಗಳ ಉಡುಗೊರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಗ್ರಾಮಸ್ಥರು ಭಾನುವಾರ ಸಂಜೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿದರು.

 ಗ್ರಾಮದ ವಿವಿಧ ಸಮಾಜದವರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಬ್ಬದ ವಾತಾವರಣದಲ್ಲಿ ಸಚಿವರ ಸ್ವಾಗತ ಹಾಗೂ ಸತ್ಕಾರ ನಡೆಯಿತು.

ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ನಿಮ್ಮ ಸಹಕಾರದಿಂದಾಗಿ ನಾನು ಈಗ ರಾಜ್ಯದ ಸಚಿವೆಯಾಗಿದ್ದೇನೆ. ಇಡೀ ರಾಜ್ಯದ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿರುವ ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸಾವಗಾಂವ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಬರುವ ದಿನಗಳಲ್ಲಿಯೂ ಸಹ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿವೆ. ರೈತರ ಸಲುವಾಗಿ ಗ್ರಾಮದ ಕೆರೆಗೆ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ, ಗ್ರಾಮದ ಒಳಾಂಗಣ ರಸ್ತೆಗಳ ಅಭಿವೃದ್ಧಿ (ಕಾಂಕ್ರೀಟಿಕರಣ) ಹಾಗೂ ಸ್ಮಶಾನದ ಅಭಿವೃದ್ಧಿ ಯೋಜನೆಗಳನ್ನು ಅತೀ ಶೀಘ್ರದಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಎನ್. ಕೆ. ಪಾಟೀಲ್, ಬಾಳು ಪಾಟೀಲ, ಮಾಯಪ್ಪ ಘಾಟೆಗಸ್ತಿ, ಸಂಗೀತಾ ಬಾನೇಕರ್ ಗಣಪತ ಕಾಕತ್ಕರ್, ಗೀತಾ ಸಾವಗಾಂವ್ಕರ್, ಮಾರುತಿ ಪಾಟೀಲ, ಭರ್ಮಾ ಕಾಂಬಳೆ, ಪಿ.ಜಿ. ಹಲಾಲಿ, ನಾರಾಯಣ ಕದಂ, ನೂರಸಾಬ್ ಜಮಾದಾರ, ಉಮೇಶ ಪಾಟೀಲ, ರೇಖಾ ಸಿಂಗ್, ಸಂತೋಷ ಪಾಟೀಲ ​ಮೊದಾಲಾದವರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page