ಪ್ರಗತಿವಾಹಿನಿ ಸುದ್ದಿ; ಪುರ್ನಿಯಾ: ಗುಜರಿ ತುಂಬಿದ್ದ ವಾಹನ ಪಲ್ಟಿಯಾಗಿ 8 ಕಾರ್ಮಿಕರು ಮೃತಪಟ್ಟ ಘೋರ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ.
ಬಿಹಾರದ ರಾಷ್ಟ್ರೀಯ ಹೆದ್ದಾರಿ 57ರ ಜಲಾಲಗಢ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುಜರಿ ವಾಹನ ಬೆಂಗಾಲದಿಂದ ಜಮುಯಿ ಕಡೆ ತೆರಳುತ್ತಿತ್ತು. ಲಾರಿ ಓವರ್ ಟೇಕ್ ಮಾಡಲು ಹೋಗಿ ವಾಹನ ಪಲ್ಟಿಯಾಗಿದೆ. ಸ್ಥಳಕ್ಕೆ ಜಲಾಲಘಡ ಠಾಣೆ ಪೊಲೀಸರು ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೆ ಎರಡು ಹೊಸ ರೂಪಾಂತರಿ ವೈರಸ್ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ