ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಲಾಭ ಗಳಿಸುವ ಉದ್ದೇಶದಿಂದ ಬಾಲಕಿಯೊಬ್ಬಳ ಅಂಡಾಣುಗಳನ್ನು ಮಾರಾಟ ಮಾಡುವಂತೆ ಬಲವಂತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ತಮಿಳುನಾಡು ಸರಕಾರ ಆದೇಶಿಸಿದೆ.
16 ವರ್ಷದ ಬಾಲಕಿಯೊಬ್ಬಳು ಆಕೆಯ ತಾಯಿಯ ಪ್ರಿಯಕರನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಈ ಬಾಲಕಿಯ ಅಂಡಾಣುಗಳನ್ನು ನೀಡುವಂತೆ ಆಸ್ಪತ್ರೆಗಳಿಂದ ಬಲವಂತ ಮಾಡಲಾಗುತ್ತಿತ್ತು. ಈ ಆಸ್ಪತ್ರೆಗಳು ಲಾಭಕ್ಕಾಗಿ ಅಂಡಾಣುಗಳನ್ನು ಮಾರಾಟ ಮಾಡುವುದನ್ನೇ ದಂಧೆಯಾಗಿ ಮಾಡಿಕೊಂಡಿದ್ದವೆನ್ನಲಾಗಿದೆ.
ಇರೊಡೆ ಹಾಗೂ ಸೇಲಂನ ಸುಧಾ ಹಾಸ್ಪಿಟಲ್, ಪೆರುಂದುರೈನ ರಾಮಪ್ರಸಾದ ಹಾಸ್ಪಿಟಲ್, ಹೊಸೂರಿನ ವಿಜಯ ಹಾಸ್ಪಿಟಲ್ ಹಾಗೂ ತಿರುವನಂತನಪುರಂನ ಮಾತೃತ್ವ ಆಸ್ಪತ್ರೆ ಮತ್ತು ಪ್ರನಾಳ ಶಿಶು ಕೇಂದ್ರಗಳನ್ನು ಶಾಶ್ವತ ಮುಚ್ಚಲು ಅಲ್ಲಿನ ಆರೋಗ್ಯ ಇಲಾಖೆ ಆದೇಶಿಸಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಹ್ಮಣಿಯನ್ ತಿಳಿಸಿದ್ದಾರೆ.
ಕೇರಳ ಹಾಗೂ ಆಂಧ್ರ ಪ್ರದೇಶದ ಎರಡು ಆಸ್ಪತ್ರೆಗಳೂ ಇದೇ ದಂಧೆಯಲ್ಲಿ ತೊಡಗಿದ್ದು ಇವುಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುಷ್ಮಿತಾ ಸೇನ್ ಜತೆ ಲಲಿತ್ ಮೋದಿ ಡೇಟಿಂಗ್; ಫೋಟೋ ಶೇರ್ ಮಾಡಿ ಮಾಹಿತಿ ನೀಡಿದ ಐಪಿಎಲ್ ಮಾಜಿ ಅಧ್ಯಕ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ