Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಮನೆ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಕಳ್ಳತು ಮನೆಗೆ ನುಗ್ಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಈ ಘಟನೆ ಬೆಳಗಾವಿ ನಗರದ ಭೋಯಿ ಗಲ್ಲಿಯಲ್ಲಿ ನಡೆದಿದೆ. 

ಬೆಳಗಾವಿ ನಗರದ ಭೋಯಿ ಗಲ್ಲಿಯಲ್ಲಿ ಗುರುವಾರ ರಾತ್ರಿ 1.45ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದೆ ವೇಳೆ ಬೀಗ ಮುರಿದು ಮನೆಗೆ ನುಗ್ಗಿರು ಇಬ್ಬರು ಕಳ್ಳರು, ಮನೆಯ ವಸ್ತುಗಳನ್ನು ಕದ್ದೊಯ್ದಿದ್ದಾರೆ.  ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಗರದಲ್ಲಿ ಈ ರೀತಿ ಹೆಚ್ಚುತ್ತಿರುವ ಕಳ್ಳತನದಿಂದ ಎಚ್ಚೆತ್ತ ನಾಗರಿಕರು ರಾತ್ರಿ ಪೊಲೀಸ್ ಗಸ್ತು ಹೆಚ್ಚು ತಿರುಗುವಂತೆ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button