*ಮನೆಗಳ್ಳನ ಬಂಧನ; 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ವಶಕ್ಕೆ*
ಯಮಕನಮರಡಿ ಪೊಲೀಸರ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ಹೊಸೂರ ಮತ್ತು ಉಳ್ಳಾಗಡ್ಡಿ ಖಾನಾಪೂರದಲ್ಲಿ ಇತ್ತಿಚಿಗೆ ಮನೆ ಕಳ್ಳತನ ಪ್ರಕರಣ ನಡೆದಿತ್ತು. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 6,58,800 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಮತ್ತು 640 ಗ್ರಾಂ ತೂಕದ 44,800/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲಿಸರ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಶೆ ಮಾಡಿದ್ದಾರೆ.
ಮೇ 29ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣ ಸಂಬಂಧ ಪಾರೇಸ ಭರಮಪ್ಪಾ ಅಕ್ಕತಂಗೇರಹಾಳ ಸಾಃ ಹೊಸೂರ ಇವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊಸೂರ ಗ್ರಾಮದ ಮನೆಗೆ ನುಗ್ಗಿರುವ ಕಳ್ಳರು, ಮನೆಯಲ್ಲಿ ಇದ್ದ 25 ಗ್ರಾಂ ತೂಕದ ಬೆಳ್ಳಿಯ 2 ಆಭರಣಗಳನ್ನು ಮತ್ತು 290 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹೀಗೆ ಒಟ್ಟು 1,16000/- ರೂ ಕಿಮ್ಮತ್ತಿನ ವಸ್ತುಗಳನ್ನು ಮತ್ತು 32,000/- ರೂ. ನಗದು ಹಣವನ್ನು ಕದ್ದೊಯ್ದಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದರು. ಪಿ.ಎಸ್.ಐ ಶಿವು ಮಣ್ಣಿಕೇರಿ ನೇತೃತ್ವದಲ್ಲಿ ವಾಯ್.ಡಿ ಗುಂಜಗಿ,ಎಸ್.ಟಿ ಪೂಜೇರಿ, ಎಸ್.ಎ ಶೇಖ, ಶಂಕರ ಚೌಗಲಾ, ಎಲ್.ಬಿ.ಹಮಾಣಿ, ಸತೀಶ ರಡ್ಡಿ, ಪಿ.ಡಿ ಗವಾಣಿ.ಎಸ್.ಎ ಘೋಲಿ, ಪಿ.ಬಿ.ಗಾಡಿವಡ್ಡರ, ರಮೇಶ್ ಛಾಯಾಗೋಳ, ಪಿ.ಐ ಯಮಕನಮರಡಿ ಮತ್ತು ಡಿ.ಹೆಚ್.ಮುಲ್ಲಾ ಡಿ.ಎಸ್.ಪಿ ಗೋಕಾಕ ಮತ್ತು ವೇಣುಗೋಪಾಲ ಹೆಚ್ಚುವರಿ ಎಸ್.ಪಿ ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ಮಾರ್ಗದರ್ಶನದಲ್ಲಿ ಸಂಶಯುತ ಆರೋಪಿ ವಿಶಾಲ ನರಸಿಂಗ ಶೇರಖಾನೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೊಸೂರ ಗ್ರಾಮದಲ್ಲಿಮೇ 29ರಂದು ಮನೆಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತನಿಂದ ಕಳ್ಳತನಕ್ಕೆ ಉಪಯೋಗಿಸಿದ ಕಾರು ಹಾಗೂ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ