ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಈವರೆಗೆ ಒಟ್ಟೂ ಎಷ್ಟು ಜನರಿಗೆ ಕೊರೋನಾ ಸೋಂಕು ತಗುಲಿದೆ? ಎಷ್ಟು ಜನರು ಸಾವಿಗೀಡಾಗಿದ್ದಾರೆ? ಸಧ್ಯ ಎಷ್ಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ?
ಇಲ್ಲಿದೆ ಸಮಗ್ರ ಮಾಹಿತಿ –
ಕರ್ನಾಟಕದಲ್ಲಿ ಈವರೆಗೆ ಒಟ್ಟೂ 28,67,158 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದು ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಮಾಹಿತಿ. ಇವರಲ್ಲಿ 27,93,498 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಧ್ಯ 37,906 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ 2290 ಜನರಿಗೆ ಹೊಸದಾಗಿ ಕೊರೋನಾ ದೃಢಪಟ್ಟಿದ್ದು, 68 ಜನರು ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ ಈವರೆಗೆ 35,731 ಜನರು ಕೊರೋನಾದಿಂದಾಗಿ ಸಾವಿಗೀಡಾಗಿದ್ದಾರೆ.
ಸಧ್ಯ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.1.48, ಸಾವಿನ ಪ್ರಮಾಣ ಸರಿಯಾಗಿ ಇದರ ಎರಡುಪಟ್ಟು, ಅಂದರೆ ಶೇ. 2.96.
ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಈವರೆಗೆ 3,59,101 ಜನರನ್ನು ತಪಾಸಣೆಗೊಳಪಡಿಸಲಾಗಿದೆ.
ಇಲ್ಲಿದೆ ಇನ್ನಷ್ಟು ಸಮಗ್ರ ಮಾಹಿತಿ, ಜಿಲ್ಲಾವಾರು ವಿವರ – ಕ್ಲಿಕ್ ಮಾಡಿ –
ಕನ್ನಡ – 09-07-2021 HMB Kannada
ಇಂಗ್ಲೀಷ್ – 09-07-2021 HMB English
ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ