Latest

ರಾಕ್ ಲೈನ್ ವೆಂಕಟೇಶ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ಇದೀಗ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ರಾಕ್ ಲೈನ್ ನೀಡಿದ್ದ ಹೇಳಿಕೆ ಖಂಡಿಸಿ ಇಂದು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ರಾಕ್ ಲೈನ್ ವೆಂಕಟೇಶ್ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Home add -Advt

ಈ ವೇಳೆ ಮಾತನಾಡಿದ ಯುವ ಜನತಾದಳ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಮಂಡ್ಯ ರಾಜಕಾರಣಕ್ಕೂ ರಾಕ್ ಲೈನ್ ಗೂ ಏನ್ ಸಂಬಂಧ, ಕುಮಾರಸ್ವಾಮಿ ಮನೆ ಒಡೆಯಲು ರಾಕ್ ಲೈನ್ ಯತ್ನಿಸಿದ್ದಾರೆ. ಇವರಿಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ಚಿತ್ರರಂಗವನ್ನೇ ಹಾಳು ಮಾಡಿದ ಇವರು ಈಗ ರಾಜಕಾರಣವನ್ನೂ ಹಾಳು ಮಾಡುತ್ತಿದ್ದಾರೆ. ಸಾಮಾನ್ಯರ ತಲೆ ಒಡೆದು ದುಡ್ದು ಮಾಡಿದವರು, ಸುಮಲತಾರನ್ನು ಮುಂದಿಟ್ಟುಕೊಂಡು ದೇವೇಗೌಡರ ಕುಟುಂಬ ಒಡೆಯುವ ಹುನ್ನಾರ ನಡೆದಿದೆ. ಮಂಡ್ಯ ರಾಜಕೀಯಕ್ಕೆ ಬರಲು ರಾಕ್ ಲೈನ್ ಸಂಸದರಾ? ಶಾಸಕರ? ರಾಕ್ ಲೈನ್ ಆಡಿದ ಮಾತಿನ ಬಗ್ಗೆ ಮೊದಲು ಅವರು ಕುಮಾರಸ್ವಾಮಿ ಕ್ಷಮೆಯಾಚಿಸಬೇಕು. ರಾಕ್ ಲೈನ್ ಕ್ಷಮೆಯಾಚಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಅಂಬರೀಶ್ ಬಗ್ಗೆ ಮಾತನಾಡಿದ್ರೆ ಹುಷಾರ್! ಹೆಚ್.ಡಿ.ಕೆಗೆ ರಾಕ್ ಲೈನ್ ವೆಂಕಟೇಶ್ ವಾರ್ನಿಂಗ್
ಸುಮಲತಾ- ರಾಕ್ ಲೈನ್ ವೀಡಿಯೋ ಮಾಡ್ಸಿದ್ರಾ ಎಚ್ ಡಿ ಕೆ?

Related Articles

Back to top button