
ಶಾಸಕ ಅಭಯ ಪಾಟೀಲ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಉತ್ತರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಳಿ ಆನೆಯಂತಾಗಿರುವ ಬೆಳಗಾವಿಯ ಸುವರ್ಣ ವಿಧಾನಸೌಧ ಕಳೆದ 3 ವರ್ಷದಲ್ಲಿ ಸರಿಯಾಗಿ ಬಳಕೆಯೇ ಆಗಿಲ್ಲ. ಈಗ 10 ದಿನಗಳ ಅಧಿವೇಶನ ನಡೆಯುತ್ತಿದೆ. ಈಚೆಗೆ ಕೆಲವು ಕಚೇರಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.
ಆದರೆ ಸುವರ್ಣ ವಿಧಾನಸೌಧದ ನಿರ್ವಹಣೆ ವೆಚ್ಚ ಮಾತ್ರ ನಿಂತಿಲ್ಲ. ಈ ಪೈಕಿ ವಿದ್ಯುತ್ ಬಿಲ್ ಕೇಳಿದರೆ ಎಂತವರೂ ಶಾಕ್ ಆಗೋದು ಗ್ಯಾರಂಟಿ.
ಜನೆವರಿ 1, 2018ರಿಂದ ನವೆಂಬರ್ 15, 2021ರ ವರಗೆ ಕೇವಲ ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ 1,17,91,558ರೂ.
ವಿಧಾನಸಭೆಯಲ್ಲಿ ಬಿಜೆಪಿಯ ಅಭಿಯ ಪಾಟೀಲ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಈ ಉತ್ತರ ನೀಡಿದ್ದು, ಶೀಘ್ರವೇ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜನಸಾಮಾನ್ಯರು ಒಂದು ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ ವಿದ್ಯುತ್ ಕಡಿತ ಮಾಡುವ ಹೆಸ್ಕಾಂ, ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿರುವ ಸುವರ್ಣ ವಿಧಾನಸೌಧದ ವಿದ್ಯುತ್ ಕಡಿತ ಮಾಡದಿರುವುದು ಸೋಜಿಗವೇ ಸರಿ.
ರಾಜ್ಯದಲ್ಲಿ ಮತ್ತೆ 5 ಜನರಲ್ಲಿ ಒಮಿಕ್ರಾನ್ ಪತ್ತೆ: ಬೆಳಗಾವಿಯಲ್ಲೂ ಓರ್ವರಿಗೆ ಒಮಿಕ್ರಾನ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ