*ಶ್ವಾನಗಳಿಗೆ ಯಾವ ರೀತಿ ತರಬೇತಿ ನೀಡುತ್ತೇವೆ ಹಾಗೆ ಅವು ನಮ್ಮನ್ನು ಕಾಪಾಡುತ್ತವೆ: ಸಚಿವ ಸತೀಶ್ ಜಾರಕಿಹೊಳಿ*

ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಷ್ಕಲ್ಮಶ, ಪ್ರೀತಿ, ನಿಷ್ಠೆಗೆ ಶ್ವಾನಗಳಿಗೆ ಶ್ವಾನಗಳೇ ಸರಿಸಾಟಿ, ಶ್ವಾನವನ್ನು ಪ್ರೀತಿಯಿಂದ ಬೆಳೆಸಿದಾಗ ಮಾತ್ರ ಅವು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತವೆ. ಅವುಗಳನ್ನು ಸ್ನೇಹಮಯವಾಗಿ ಬೆಳೆಸಬೇಕು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದ ಸರ್ದಾರ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಲಾದ ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಪ್ರಾಣಿ ಹಿಂಸೆ ವಿರುದ್ಧ ಜಾಗೃತಿ, ಶ್ವಾನಗಳ ಆರೈಕೆ, ಆಹಾರ, ಲಸಿಕೆ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಶ್ವಾನಗಳಿಗೆ ಯಾವ ರೀತಿ ತರಬೇತಿ ನೀಡುತ್ತೆವೆ ಹಾಗೇ ಬೆಳೆದು ನಮ್ಮನ್ನು ಕಾಪಾಡುತ್ತದೆ. ವಿದೇಶಗಳಲ್ಲಿ ಶ್ವಾನಗಳಿಗೆ ವಿಶೇಷ ಸ್ಥಾನವಿದೆ. ಆ, ಪದ್ಧತಿ ನಮ್ಮಲ್ಲಿ ರೂಡಿಯಾಗಬೇಕಿದೆ. ಶ್ವಾನಗಳ ಬಗ್ಗೆ ಹೆಚ್ಚಿನ ಜಾಗೃತ ಕಾರ್ಯಗಳು ನಡೆಯಲಿ, ಶ್ವಾನಗಳ ಹಾವಳಿಯಿಂದ ಇನ್ನಿತರ ಸಮಸ್ಯೆಗಳು ಆಗುತ್ತವೆ. ಹೀಗಾಗಿ ನಾವು ಅವುಗಳನ್ನು ಪ್ರೀತಿಯಿಂದ ಕಾಣುವುದರಜೊತೆಗೆ ನಮ್ಮಂತೆ ಬದುಕಲು ನಾವೆಲ್ಲರೂ ಅವಕಾಶ ಮಾಡಿಕೊಡಬೇಕು ಎಂದರು.

10 ವರ್ಷಗಳ ಬಳಿಕ, ಶ್ವಾನ ಪ್ರದರ್ಶನ ಬೆಳಗಾವಿಯಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷವೂ ಶ್ವಾನ ಪ್ರದರ್ಶನ ನಡೆಯಲಿ. ಪೊಲೀಸ್ ಇಲಾಖೆಯೂ ಹೆಚ್ಚಿನ ಶ್ವಾನಗಳಿಗೆ ತರಬೇತಿ ನೀಡಿದಾಗ ಅಪರಾದ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗುತ್ತೆ. ನಗರ ಶ್ವಾನ ದಳದ ಸಾಮರ್ಥ್ಯ ಮತ್ತೆ ವೃದ್ಧಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಆಸೀಫ್ ಜಿಲ್ಲಾಧಿಕಾರಿಗಳಿ ಮೋಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಸಿಂಧೆ, ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬರಾವ್, ಎಸ್ಪಿ ಕೆ. ರಾಮರಾಜನ್, ಬುಡಾ ಮಾಜಿ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಸುನೀಲ್ ಹನ್ನಮಣನವರ್, ವಿನಯ ನಾವಲಗಟ್ಟಿ ಬೆಳಗಾವಿ ಪಶುಪಾಲನಾ ಇಲಾಖೆಯ ಡಿಡಿ ಆನಂದ್ ಪಾಟೀಲ್ ಪಶು ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.




