Belagavi NewsBelgaum NewsKannada NewsKarnataka News

HSRP ನಂಬರ್ ಪ್ಲೇಟ್ ಕಡ್ಡಾಯ: ಪೊಲೀಸ್ ಆಯುಕ್ತರ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೊಂದಣಿ ಸಂಖ್ಯೆಗಳಿಲ್ಲದ ವಾಹನಗಳನ್ನು ಅಪರಾಧಿಕ ಕೃತ್ಯಗಳಲ್ಲಿ ಬಳಸಲಾಗುತ್ತಿರುವುದು ಈ ಹಿಂದಿನ ಪ್ರಕರಣಗಳ ತನಿಖೆಗಳಿಂದ ಕಂಡು ಬಂದಿದೆ. ಹಾಗಾಗಿ ಹೆಚ್.ಎಸ್.ಆರ್.ಪಿ. ನಂಬರ ಪ್ಲೇಟ್ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.‌

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಟಿಡಿ 193 ಟಿಡಿಒ 2021, ದಿನಾಂಕ: 16/011/2023 ರ ಮೇರೆಗೆ ದಿನಾಂಕ: 01/04/2019 ರ ಪೂರ್ವದಲ್ಲಿ ನೋಂದಣಿಯಾದ ಮತ್ತು ಹೆಚ್.ಎಸ್.ಆರ್.ಪಿ. (ನಂಬರ ಪ್ಲೇಟ್) ಹೊಂದದೆ ಇರುವ ಎಲ್ಲ ಬಗೆಯ ವಾಹನಗಳಿಗೆ ಹೆಚ್.ಎಸ್.ಆರ್.ಪಿ. (ನಂಬರ ಪ್ಲೇಟ್) ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

Home add -Advt

ಮುಂಬರುವ ದಿನಗಳಲ್ಲಿ ಬೆಳಗಾವಿ ನಗರ ಪ್ರದೇಶದಲ್ಲಿ ಸಂಚರಿಸುವಂತಹ ಎಲ್ಲ ಬಗೆಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಎಲ್ಲ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. 

ನೋಂದಣಿ ಸಂಖ್ಯೆ ಇಲ್ಲದೇ ಸಂಚರಿಸುವಂತಹ ವಾಹನಗಳನ್ನು ತಡೆಹಿಡಿದು ಕಾನೂನು ಪ್ರಕಾರ ಕ್ರಮ ಕೈಕೊಳ್ಳಲಾಗುವುದು. ಕಾರಣ ವಾಹನ ಮಾಲೀಕರು ಈ ಬಗ್ಗೆ ಎಚ್ಚರವಹಿಸಿ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ವಾಹನ ನೋಂದಣಿ ಸಂಖ್ಯೆಗಳನ್ನು ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ.

Related Articles

Back to top button