Karnataka News

*ಹುಬ್ಬಳ್ಳಿ-ಧಾರವಾಡ ಬಂದ್: ಟಾಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಡಾ.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು ಹುಬ್ಬಳ್ಳಿ- ಧಾರವಾಡದಲ್ಲಿ ಬಂದ್‌ಗೆ ಕರೆ ನೀಡಿವೆ.

ಬಂದ್ ಪರಿಣಾಮವಾಗಿ ಹಲವು ಕಡೆ ಖಾಸಗಿ ಬಸ್, ವಾಹನಗಳ ಚಕ್ರಗಳ ಗಾಳಿ ತೆಗೆದಿದ್ದು ಚನ್ನಮ್ಮ ವೃತ್ತದ ಬಳಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಪ್ರತಿಭಟನಾಕಾರರು ವಿವಿಧ ಕಡೆ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು.

ಬೆಳಿಗ್ಗೆ 6 ಗಂಟೆಯಿಂದಲೇ ಚನ್ನಮ್ಮ ವೃತ್ತ ಹೊಸೂರು ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಂಗಡಿ, ಮಳಿಗೆಗಳು ಮುಚ್ಚಿದ್ದರೆ ಒಳ ರಸ್ತೆಗಳಲ್ಲಿ ಕೆಲವೊಂದು ಮಳಿಗೆ, ಅಂಗಡಿಗಳು ತೆರೆದಿತ್ತು ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Home add -Advt

Related Articles

Back to top button