Karnataka NewsLatestNational

*ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಸೆ.16ರಂದು ಪ್ರಧಾನಿ ಮೋದಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಸೆ.16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಅಂದು ಅಹ್ಮದಾಬಾದ್ ನಿಂದ ವರ್ಚುವಲ್ ಮೂಲಕ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಸೆ.16ರಂದು ಹುಬ್ಬಳ್ಳಿ- ಪುಣೆ ನಡುವೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸಲಿದ್ದು, ಹುಬ್ಬಳ್ಳಿಯಿಂದ ಸೆ.18ರಿಂದ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ವಾರದಲ್ಲಿ 3 ದಿನ: ವಾರದಲ್ಲಿ ಮೂರು ಬಾರಿ ಬುಧವಾರ, ಶುಕ್ರವಾರ, ರವಿವಾರ ಹುಬ್ಬಳ್ಳಿಯಿಂದ ಹಾಗೂ ಗುರುವಾರ, ಶನಿವಾರ, ಸೋಮವಾರದಂದು ಪುಣೆಯಿಂದ ವಂದೇ ಭಾರತ್ ಎಕ್ಸಪ್ರೆಸ್ ಸಂಚರಿಸಲಿದೆ.

ಕೊಲ್ಲಾಪುರ ಮೂಲಕ ಸಂಚರಿಸಲ್ಲ: ಇದು ಹುಬ್ಬಳ್ಳಿ-ಪುಣೆ ನಡುವೆ ನೇರವಾಗಿ ಸಂಚರಿಸಲಿದ್ದು ಕೋಲ್ಹಾಪುರ ಮೂಲಕ ಸಂಚರಿಸುವುದಿಲ್ಲ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಈ ರೈಲುನ್ನು ಪ್ರತಿ ದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವೆ. ಇದಕ್ಕಾಗಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರದಿಂದ ಉತ್ತರ ಕರ್ನಾಟಕ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಾಹತುಗಳಿಗೆ ಅನಕೂಲವಾಗಲಿದೆ. ಅಲ್ಲದೇ, ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಪ್ರಮುಖವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button